Sunday, March 31, 2013

ಆಗಂತುಕ ಕನಸುಗಳು..




ಬಯಕೆಯ ಕನಸುಗಳು
ಕಾರ್ಮೋಡ ಕವಿದ ಬದುಕಿಗೇಕೆ
ಬಂದವು ಆಗಂತುಕರಂತೆ
ನಿರ್ಭೀಡೆಯಲಿ; ಒಳಬಂದು
ಬೀರುತಿಹ ದೂರ್ತ ನಗೆಗೆ
ಕದಡಿದ ಮನದಲಿ ಅಸಹಾಯಕತೆಯ
ಅನಂತ ಮೌನ.

ನೋಟದಲೆ ನಿಂತಿಹ ಕನಸುಗಳು
ಇಳಿ ಸಂಜೆಯ ಮಬ್ಬಿನಲಿ
ಮಂಪರಿನ ಹಾಳು ನಿದ್ದೆಯ ಕಂಗೆಡಿಸುತಿಹ
ಕನವರಿಕೆಗಳು, ಅಳಿದುಳಿದಿಹ ಮೋಹವು
ಉರುಳುತಿದೆ ಕಣ್ಣ ಹನಿಯಾಗಿ
ಆಸರೆಗಾಗಿ ಕೈ ಚಾಚಿದೆ ಬದುಕು
ಜಾರುತಿಹ ಜೀವನದಲಿ ಮಡುಗಟ್ಟಿದೆ ಮೌನ.

 
ಯಾವುದೋ ಅನುಬಂಧಕೆ ಜೋತುಬಿದ್ದ
ನಂಟಿನಲಿ ಅನುಮಾನದ ಎಳೆಗಳು
ಅನುಸಂಧಾನಗೊಳ್ಳದೆ ಅತಂತ್ರವಾಗಿರುವ
ಭಾವಗಳು ಅಲೆದಲೆದು ನಿಂತ್ರಾಣಗೊಂಡ
ಮನದಲಿನ್ನು ಕೊನೆಗಾಣದ ಮೌನ
ಮುಗಿಯದ ಬದುಕು.

1 comment:

AntharangadaMaathugalu said...

ಅರಿಯದೇ ನಾವೆಲ್ಲರೂ ಜೋತುಬೀಳುವ, ’ಅನುಬಂಧ’ ಎನಿಸಿಕೊಳ್ಳುವ ಸಂಬಂಧಗಳಲ್ಲೇ ಬರುವ ಅನುಮಾನದ ಎಳೆಗಳೇ ಅನುಸಂಧಾನವೆನ್ನುವ ಭಾವಗಳನ್ನು ಛಿದ್ರಗೊಳಿಸುವುದು ಅಲ್ಲವೇ...? ವಿಷಾದ ದ ಛಾಯೆ ದಟ್ಟಾವಾಗಿದೆ.. ಆದರೂ ಅದೇಕೋ ಪದಗಳು, ಸಾಲುಗಳು ಇಷ್ಟವಾಯಿತು..

ಶ್ಯಾಮಲಾ