ಅಂತರಂಗದ ಮೌನ ಸರೋವರ
ನೀನು ಮುಖವಿಟ್ಟು
ಕಾಣುವ ಬಿಂಬಕೆ ನೂರು ರೂಪ
ಕಾಮನ ಕಲರವಕೆ ಬಯಕೆಯ ನೂರು ಬಣ್ಣ!!
************************
ಸುಮ್ಮನೆ ಬಿಂದುವಾದೆ
ಸಾಗುವ ದಾರಿಯಲಿ
ಹೇಳಲಾಗದ ಭಾವಗಳು ಹಾಗೇ ಬಿದ್ದಿವೆ
*******************
ಹಸಿಯಾಗಿದೆ ನಿನ್ನೊಲವ ಭಾವವು
ಬಿಗಿಹಿಡಿದ ಬಾಹುಗಳಿಗೆ ಬಂಧನವೇ
ಬಿಡುಗಡೆಯ ಹರುಷವು !!
ನಿನ್ನೆದೆಯ ಮೇಲೆ ನಲಿಯುವ
ತುಟಿಗಳಿಗೆ ತಾಕುವ ನಿನ್ನ ಬಿಸಿಯುಸಿರಲಿ ಬಿಡುಗಡೆಯ ಹರುಷವು !!
********************
ಮತ್ತೆ ಮತ್ತೆ ಸಿಗುವ
ಮತ್ತೆ ಮತ್ತೆ ಸಿಗುವ
ಸಂಭ್ರಮ ಸಡಗರಕೆ
ನಿನ್ನದೇ ಹುನ್ನಾರ!!
1 comment:
ನಿಮ್ಮ ಕವನಗಳು ಉತ್ತಮವಾಗಿದೆ.
..
http://spn3187.blogspot.in/ (ದಿನಕ್ಕೊಂದು ಹೊಸ ಮಾಹಿತಿ 31/30/28/29)
Post a Comment