Friday, August 14, 2009

ತೀರವು ನಾ...





ತೀರವು ನಾ...

ನದಿಯೊಡಲ ವಿಕ್ಷಿಪ್ತ
ನಿನ್ನ ಅಂತರಾಳವು
ನಿಗೂಡ ಒಡಲಿಂದ
ಚಿಮ್ಮಿ ಬರುವ
ಒಲವಿನ ಅಲೆಯ
ಜೀವಸ್ಪರ್ಷದಲಿ
ರೋಮಾಂಚನವಾಗುತಿಹ
ತೀರವು ನಾ.....


ಅಪರಿಮಿತ

ಅಲೆಗಳ ಬಡಿತದಲಿ
ನದಿಯೊಡಲ
ತುಮುಲವರಿವ ತವಕದಲಿ
ಮೂಡಿದ ಅವಿನಾಭಾವ
ಸಂಭಂದದಲಿ
ಪುಳಕಿತವಾಗುತಿಹ
ತೀರವು ನಾ....


ನನಗೇಕೆ ಹೀಗನಿಸುತ್ತದೆ ಎಂಬುದನ್ನು ನಾನೇ ಪುನಃ ಪುನಃ ಪ್ರಶ್ನಿಸಿಕೊಂಡು ಉತ್ತರ ಹುಡುಕಲು ಪ್ರಯತ್ನಿಸಿದ್ದೇನೆ. ಆದರೇ ಉತ್ತರ ಸಿಗದೇ ಮತ್ತೆ ಮತ್ತೆ ಅದೇ ಗೊಂದಲಕ್ಕೆ,ಜಿಗ್ಜ್ಞಾಸೆಗೆ ಒಳಗಾಗಿದ್ದೇನೆ, ಆಗುತ್ತಲೇ ಇದ್ದೇನೆ . ಅದೇನೋ ತಿಳಿಯದು ನನಗಂತು ಪ್ರೇಮ, ಪ್ರೀತಿ, ವಿರಹ,ಏಕಾಂಗಿತನದ ತೀವ್ರ ತರವಾದ ಯಾವ ಅನುಭವ ಇಲ್ಲದೇ ಕೇವಲ ಕಲ್ಪನೆಯ ವಿಹಂಗಮ ಲೋಕದಲಿ ಹಕ್ಕಿಯ ಸ್ವಚಂದತೆಯಲಿ ಮೂಡಿಬರುವ ಪದಲಾಲಿತ್ಯದಲಿ ಇಂತಹ ಕವನಗಳ ಬರೆದು ಬಿಡುತ್ತೇನೆ.ಯಾವಾಗಲೋ ತುಂಬಾ ದಿನಗಳ ಹಿಂದೇ ಬರೆದ, ಪ್ರೇಮ ಕವನದಂತಿರುವ ಈ ಪುಟ್ಟ ಕವನ ಕಣ್ಣಿಗೆ ಬಿದ್ದಿತ್ತು, ಹಾಗೇ ಕಣ್ಣಾಡಿಸಲು,ಕಲ್ಪನೆಯಲಿ ಅವಳ ಮನದಲಿನ ಭಾವಗಳ,ವಿಕ್ಷಿಪ್ತತೆಗಳ ತಾಕಲಾಟಗಳನು ನದಿಯ ಅಂತರಾಳದ ತಳಮಳಕ್ಕೆ ಹೋಲಿಸಿ ಒಂದು ರೂಪಕವಾಗಿ, ಹೆಣ್ಣಿನ ಮನವನು ಕವನದಲಿ ಏಕೆ ಚಿತ್ರಿಸಿದೇ ಎಂದು ನಾನೇ ಮತ್ತೆ ಮರು ಪ್ರಶ್ನಿಸಿಕೊಂಡರೆ ಉತ್ತರ ಸಿಗದಾಯಿತು.ಇಂತಹ ಪ್ರತಿಮಾ ರೂಪಕಗಳು ನಿಮ್ಮನ್ನು ಕಾಡಿರುವುದು ಸಾಮಾನ್ಯ ಅಲ್ಲವೇ, ಆಗಾಗ್ಗಿ ಕವನವ ಓದಿ ನಿಮ್ಮ ಅನಿಸಿಕೆಯನ್ನ ಬರೆಯಿರಿ,ನನ್ನ ನಿಮ್ಮ ಮನದ ತಾಕಲಾಟಗಳನು ಒಮ್ಮೆ ಒಂದು ಸಪಾಟಿನಲ್ಲಿಟ್ಟು ಪರಾಮರ್ಶಿಸೋಣ ಸ್ನೇಹಿತರೆ.

11 comments:

udaya said...

ಪುಳಕಿತವಾಗುವ ತಿರುವು ನಾ... ನದಿಯ ಹಾಗೆ ಎಲ್ಲರ ಬಾಳಲ್ಲೂ ಅಚ್ಚರಿಯ ತಿರುವು ಬರುಹುದು ಸಾಮಾನ್ಯ...ಪ್ರೇಮ, ಪ್ರೀತಿ, ವಿರಹ,ಏಕಾಂಗಿತನದ ಪ್ರೇಮ, ಪ್ರೀತಿ, ವಿರಹ,ಏಕಾಂಗಿತನ ಅನುಬವಿಸಿದವರಿಗೆ ಹೀಗೆ ಅನ್ನಿಸಬಹುದೇನೋ ತಿಳಿಯೆನು...

Prema said...

ಕುಮಾರ್ ,
ನದಿಯ ಅಲೆಗಳಿಗಿ೦ತ ಕಡಲ ಅಲೆಗಳು ಎ೦ದರೆ ಹೆಚ್ಚು ಸಮ೦ಜಸವೇನೋ
ನದಿಯ ತೀರಕ್ಕೆ ನೀರು ನಿರ೦ತರ , ಆದರೆ ಕಡಲ ಅಲೆಗಳು ತೀರಕ್ಕೆ ಒಮ್ಮೆ ಅಪ್ಪಳಿಸಿ ಒಮ್ಮೆ ಹಿ೦ದಕ್ಕೋಡಿ ತುಮುಲವನ್ನು ಉ೦ಟು ಮೂಡಿಸುತ್ತವೆ , ಹೌದಲ್ಲವೇ....

Unknown said...

ಏನಿಲ್ಲ ಮೇಡಂ ನದಿ ನನಗೆ ಜೀವನದ ರೂಪಕ, ಅದರೊಂದಿಗಿನ ಹೋಲಿಕೆ ನನಗೆ ನನ್ನ ಕವನದ ಭಾವನ ಅನ್ವೇಷಣೆಗೆ ಬಹಳ ಸೂಕ್ತ ಅನಿಸುವ ನಾನೇ ಕಂಡುಕೊಂಡ ಒಂದು ರೂಪಕವಾದದರಿಂದ ಅದರ ತೀರದಲಿ ಕೂತು ವಿಹರಿಸುತ ಸುತ್ತೋದು ಇಷ್ಟ.

Prema said...

ಓ .... ನಿರ೦ತರ ಪ್ರೀತಿಯ ಧಾರೆ
ಅಲ್ಲಿಲ್ಲ ವಿರಹ ವೇದನೆಯ ಹೊರೆ...

raksha said...

"neeghooda odalu" emba vakya chennagide....alegalu ellinda horahommuvudu tiliyuvudilla........haagene namma preethi,prema,viraha,besara ellinda baruvudo namage tiliyadu........

Sunil said...

ಮಡುಗಟ್ಟಿದ ಪ್ರೇಮ ಹನಿ ಹನಿಯಾಗಿ ಜಿನುಗುತಿದೆ. ನಿಮ್ಮ ಈ ನಾಲ್ಕು ಸಾಲಿನ ಹಿಂದಿರುವ ಭಾವನೆಯೆನು??

ಸೀತಾರಾಮ. ಕೆ. / SITARAM.K said...

Chennagi mudi bandide.

Jayalaxmi said...

ಒಂದು ಹದವಾದ ಕವನವನ್ನು ಓದಲು ಸಿಕ್ಕಿದ್ದು ತುಂಬಾ ಖುಷಿ ಅನಿಸ್ತಿದೆ.

kavya H S said...

kalpanaa loka ellarigu thumba ista aagutte anubhavakkitha, yaakendre kalpane bari sihiyanne olagondirutte,aadare anubhavadalli sihi-kahi eradu irutte.aadaru anubhava kodalaagadantaddanna kalpane kodutte. Nimma kalpanaa lahariyalli moodi banda "teeravu naa" chennagide

Roopa Satish said...

Esha,
Kavana chennaagi moodi bandide....
Kavi Kalpanege Saati Ellide?
Kalpaneyalle Jeevanada Ellaa KaavyagaLannu Saviyaballavanu Kavi Maatra.....

vanishri said...

nimma ee kavithe odida mele nange yeradu salu nenepagta ide sir.....
NAA KANASUGALANU KANDE
AVU MATTARIGO NANASAADAVU.....