"ಯಾರು ಹೆದರೋದು ಬೇಡ,ನಮ್ಮ ರಾಜ್ಯದಲ್ಲಿ ಇನ್ನು ಸೋಂಕು ಜಾಸ್ತಿ ಹರಡಿಲ್ಲ, ನಮ್ಮಲ್ಲಿ ಸತ್ತವರ ಸಂಖ್ಯೆ ಕಡಿಮೆ,ನಾನು ಬಳ್ಳಾರಿಯಿಂದಲೇ ದಿನವೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ, ನಮ್ಮಲ್ಲಿ ಯಾವ ತೊಂದರೆಯೂ ಆಗೋಲ್ಲ, ಸರ್ಕಾರ ಅದಕ್ಕೆ ಬೇಕಾದ ರೀತಿಯಲ್ಲಿ ಜನರಿಗೆ ನೆರವು ನೀಡುತ್ತದೆ" ಹೀಗೆ ರಾಜ್ಯದ ಆರೋಗ್ಯ ಮಂತ್ರಿ ಹೇಳಿದ್ದನ್ನೇ ಹೇಳುತ್ತ,H1N1 ತಡೆಗೆ ತಾನು ಕೈಗೊಂಡ ಒಂದೇ ಒಂದು ಕ್ರಮದ ಬಗ್ಗೆಯೂ ಸರಿಯಾದ ವಿವರಣೆ ನೀಡದೆ ರಾಜಕಾರಣಿಗಳು ಹೇಳುವ ಮಾಮೂಲು ಶೈಲಿಯಲ್ಲೇ,ಮಾತನಾಡುತ ಉದಾಸೀನತೆಯ ಪರಾಕಾಷ್ಟೆ ಮೆರೆಯುವ ಇಂತವರನ್ನ ನೋಡಿದರೆ ಇವೆಲ್ಲ ನಡೆಯೋದು ಭಾರತದಲಿ ಮಾತ್ರವೇನೋ ಅನಿಸುತ್ತದೆ ನನಗೆ.ಹೇಳಿಕೊಳ್ಳಲು ಮಾತ್ರ ನಮ್ಮದು ಪ್ರಪಂಚದ ಸರ್ವಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಆದರೇ ಅದರ ಒಳಗಿರುವುದೆಲ್ಲ ಟೊಳ್ಳು ಭರವಸೆಗಳ ಜಾಡು.ಕೆಟ್ಟ ರಾಜಕೀಯ ವ್ಯವಸ್ಥೆ ದೇಶದ ಎಲ್ಲ ಆಯಾಮಗಳನು ತನ್ನ ಭದ್ರಬಾಹುವಿನೊಂದಿಗೆ ಹಾಳುಗೆಡುವುತ್ತಲೇ ಸಾಗುತ್ತಿದೆ.ಜನ ನಾವುಗಳು ಮಾತ್ರ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ ಎಚ್ಚರದಲ್ಲೂ ಪ್ರಜ್ಞಾಹೀನರಂತೆ ಇದಾವುದು ನಮಗೆ ಸಂಭಂದಿಸಿದ ವಿಷಯವಲ್ಲ ಎಂದು ಜಾಣಕುರುಡುತನ ಪ್ರದರ್ಶಿಸುತ, ಸ್ವಕಾರ್ಯದಲಿ ಮುಳುಗಿ ಹೋಗಿದ್ದೇವೆ.
ನಮ್ಮ ಜನಗಳಿಂದ ಚುನಾಯಿತವಾದ ಸರ್ಕಾರ ಅರ್ಥಾತ್ ಈ ಜನಪ್ರತಿನಿಧಿಗಳಿಗೆ,ಸಾಮಾಜಿಕ ಜವಬ್ದಾರಿ ಎಂಬುದು ಏನು? ಸಾಮಾಜಿಕ ಕಾಳಜಿ ಎಂದರೆ ತಿಳಿದಿದೆಯೇ ನಿಮಗೆ ಮಹಾನುಭಾವರೇ? ಎಂದು ಮೊದಲು ಕೇಳಿ ತಿಳಿಯಬೇಕು.ಅವರ ಪ್ರಕಾರ ಸಮಾಜದಲ್ಲಿ ಸಮಸ್ಯೆಗಳು ಇದ್ದೆ ಇರುತ್ತವೆ,ಸಮಾಜಕ್ಕೆ ಸಮಸ್ಯೆಗಳ ಬರವೇ? ಅವುಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬಸ್ವಭಾವದ,ದಪ್ಪ ಚರ್ಮದ ರಾಜಕಾರಣಿ,ಮಂತ್ರಿ ಮಹೋದಯರಿಗೆಂದು ತಿಳಿಯದು ಜನ ಸಾಮಾನ್ಯನ ಕಷ್ಟ ಕಾರ್ಪಣ್ಯಗಳು.ರಾಜ್ಯದ ಒಬ್ಬ ಆರೋಗ್ಯ ಮಂತ್ರಿ "ನಮ್ಮ ರಾಜ್ಯದಲ್ಲಿ ಇನ್ನು ಹೆಚ್ಚು ಜನ ಸತ್ತಿಲ್ಲ,ಪಕ್ಕದ ಪುಣೆಯಲ್ಲಿ ಹರಡಿರೋವಷ್ಟು ತೀವ್ರವಾಗಿ ರೋಗ ನಮ್ಮ ರಾಜ್ಯದಲ್ಲಿ ಹರಡಿಲ್ಲ"ಅಂದರೆ ಜನರೆಲ್ಲ ರೋಗದಿಂದ ನರಳಿ ಸಾಯಬೇಕು,ಇವರು ಸಾಂಕ್ರಾಮಿಕ ರೋಗವನ್ನು ತಡೆಯುವ ಕ್ರಮ ಕೈಗೊಳ್ಳಲು ಅನ್ನೋದು ಇವರ ಮಾತಿನ ಅರ್ಥವೇನೋ,ಸುಮ್ಮ ಸುಮ್ಮನೆ ಮುಂಜಾಗ್ರತ ಕ್ರಮ ಕೈಗೊಂಡು ರೋಗ ಹರಡದಿದ್ದರೆ ಅವರ ಶ್ರಮವೆಲ್ಲ ವ್ಯರ್ಥವಾಗುತ್ತೆ,ಅನ್ನೋದು ಮಂತ್ರಿಗಳ ಯೋಚನೆ ಇರಬೇಕು.ಅವರ ಬುದ್ದಿವಂತಿಕೆಯನ್ನ ಮೆಚ್ಚಲೇ ಬೇಕು ಬಿಡಿ.
ನಾವು ರೋಗ ನಿಯಂತ್ರಿಸಲು ಎಷ್ಟು ಸಾದ್ಯವೋ ಅಷ್ಟು ಮುಂಜಾಗ್ರತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ ಎಂದು H1N1 ರೋಗದ ಬಗ್ಗೆ ಭಾಷಣ ಮುಂದುವರಿಸುತ್ತಲೇ 'ಅಗತ್ಯವಿರುವ ಹೆಚ್ಚುವರಿ ಸಿಬ್ಬಂಧಿಯನ್ನು ನೇಮಿಸಿಕೊಳ್ಳಲು ಕ್ರಮ ಜರುಗಿಸಲಾಗುವುದು, ಕೇಂದ್ರದಿಂದಲೂ ಇನ್ನು ಹೆಚ್ಚಿನ ಔಷಧ ಸವಲತ್ತನ್ನು ಪಡೆಯಲಾಗುವುದು'.ಎಂಬ ಆರಿಕೆಯ ಉತ್ತರಗಳನ್ನು ನೀಡುತ್ತಲೇ ಸಾಗುವವನು ನಮ್ಮ ಘನ ಸರ್ಕಾರದ ಆರೋಗ್ಯ ಮಂತ್ರಿಯೂ,ಅವನ ಕಾರ್ಯ ವೈಕರಿಯೂ ಅದ್ಭುತವಾದುದ್ದೆ ಅಲ್ಲವೇ.
ನೂರಾರು ಸಾಮನ್ಯ ಜನರು H1N1 ರೋಗದಿಂದ ಸತ್ತರೆ ಮಾತ್ರ ಅದನ್ನು ತಡೆಯುವ ಗಂಭೀರ ಕ್ರಮ ಜರುಗಿಸೋದು, ಒಬ್ಬ ಸತ್ತರೆ ಪಾಪ!ಅದು ಸಾವಲ್ಲ.ಹೇಳಿಕೊಳ್ಳಲು ಸಂಖ್ಯೆಯು ಅಲ್ಲ.ಲಕ್ಷ,ಸಾವಿರಗಟ್ಟಲೆ ವೋಟ್ ಬ್ಯಾಂಕಿನ ರೀತಿ ಸಾವು ಸಹ ಸಂಖ್ಯಾ ಬಲವನ್ನು ಪ್ರದರ್ಶಿಸಿದರೆ ಮಾತ್ರ ಅವರಿಗೆ ಅರಿವಾಗುವುದು,ರೋಗ ಯಾಗೆ ತೀವ್ರ ತರವಾಗಿ ಸಾಮನ್ಯ ಜನರ ಜೀವವನ್ನು ಬಲಿತೆದುಕೊಳ್ಳುತ್ತಿದೆ ಎಂದು.ಇಲ್ಲವಾದರೇ ಮಂತ್ರಿಗಳ ಪ್ರಕಾರ ಸಮಾಜದಲ್ಲಿ ಇವೆಲ್ಲ ಮಾಮೂಲು ಘಟನೆ.ಸಾಮನ್ಯನೊಬ್ಬನ 'ನೋವು''ಸಾವು' ಅದರ ವೇದನೆ ಎಲ್ಲ ಅವರಿಗೆ ಹೇಗೆ ತಿಳಿಯಬೇಕು.ಅವರೇನು 'ಸಾಮನ್ಯಜೀವೆಗಳೇ' ಅವೆಲ್ಲ ಅವರಿಗೆ ಅರ್ಥವಾಗೋಕೆ, ಅಸಮಾನ್ಯರು ಅವರು "ರಾಜ್ಯದ ಮಂತ್ರಿಗಳು"ಪ್ರಜೆಯಲ್ಲ, ಪ್ರಜೆಯಾಗಿದ್ದರೆ ಅವರೇಕೆ ಹೀಗೆ ವರ್ತಿಸುತ್ತಿದ್ದರು.ಅವರನ್ನು ದೂಷಿಸುವುದು ಸರಿಯಲ್ಲ ನಮ್ಮದೇ ತಪ್ಪು,ನಮ್ಮ ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳದೆ,ರಾಜ್ಯದ ಆರೋಗ್ಯ ಮಂತ್ರಿಗಳನು ದೂಷಿಸುವುದು ಯಾವ ನ್ಯಾಯ ಅಲ್ಲವೇ? ಸಾಮಾನ್ಯರು ನಾವುಗಳು ನಮ್ಮ ಇತಿ-ಮಿತಿಗಳನು ಅರಿತು ಮಾತನಾಡುವುದ ಕಲಿಯಬೇಕು ಮೊದಲು.
ಬಾಬ ಆಮ್ಟೆಯಂಥ ಮಹಾನ್ ಜೀವಿಗಳು ಬೀದಿಯಲಿ ಬಿದ್ದು ನರಳಾಡುತ್ತಿದ್ದ 'ಕುಷ್ಟ ರೋಗಿಯ'ವೇದನೆಯನ್ನು ಕಂಡು,ಅಂದಿನಿಂದಲೇ ತನ್ನ ಜೀವಮಾನವಿಡಿ ಕುಷ್ಟರೋಗಿಗಳ 'ಕಲ್ಯಾಣಕ್ಕಾಗಿಯೇ' ದುಡಿದು,ಪರರ ಸೇವೆಯೇ ದೇವರ ಕಾರ್ಯವೆಂಬಂತೆ ಬದುಕಿ ಸಾವಿರಾರು ನಿರ್ದಯಿ,ನಿರ್ಗತಿಕರಿಗೆ ಸ್ವಾವಲಂಬನೆಯ ಬದುಕ ದಾರಿ ತೋರಿಸಿ,"ಆನಂದವನ"ಎಂಬ ಸ್ವಯಂ ಸೇವಾ ಶಿಬಿರವನು ಕಟ್ಟಿ ಬೆಳಸಿ,ಅಲ್ಲಿ ಬಂದ ವಿಕಲಚೇತನರೆಲ್ಲ ಸ್ವಾಭಿಮಾನಿಗಳಾಗಿ ಬದುಕುವಂತೆ,ಸಾವಿರಾರು ಅನಾಥರಿಗೆ ಪೋಷಕರಾಗಿ ಅವರ ಬಾಳನು ಹಸನಾಗಿಸಿ,ಕೊನೆಯವರೆಗೂ ತನ್ನಲ್ಲಿಗೆ ಬಂದವರ ನೋವಿಗೆ ಸ್ಪಂಧಿಸಿದ ಜೀವಾತ್ಮರಿದ್ದ ನಾಡಿನಲ್ಲಿ ಇಂತಹ 'ಆರೋಗ್ಯ ಮಂತ್ರಿ' ಇದ್ದಾರೆ ಎಂಬುದು ಇಂದಿನ ವಾಸ್ತವದ ವಿಪರ್ಯಾಸವಷ್ಟೆ.
ಅವರುತಾನೇ ಏನ ಮಾಡಿಯಾರು ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾರೆ,ಅದು ಅಲ್ಲದೆ ಬಳ್ಳಾರಿಯ ಕೋಟ್ಯಾಂತರ ರೂಪಾಯಿಯ ಅವರ ವ್ಯವಹಾರವ ಬಿಟ್ಟು ಇಲ್ಲಿ ಯಾರೋ ಒಬ್ಬ ಸಾಮಾನ್ಯನ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ.ಹಾಗಾಗಿ ಸಾಮಾನ್ಯರೇ ನೀವುಗಳೇ ಸ್ವಲ್ಪ ಸಹಿಸಿಕೊಂಡು,ಅವರೊಂದಿಗೆ ಸಹಕರಿಸಿ ಅನ್ನೋದು ನಾನೊಬ್ಬ ಭವ್ಯ ಭಾರತದ ಮತದಾರನಾಗಿ ನಿಮ್ಮಲ್ಲಿ ಮಾಡುವ ವಿಜ್ಞಾಪನೆ.
13 comments:
ಸರಿಯಾದ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ ಒಂದೇ ಒಂದು ಸಾವು ಸಂಬವಿಸದ ಹಾಗೆ ತಡೆಯ ಬಹುದಿತ್ತು... ಎಲ್ಲ ಮಂತ್ರಿಗಳು ಲಾಲ್ ಬಹುದ್ದುರ್ ಶಾಸ್ತ್ರೀ ತರಹ ಕೆಲಸ ಮಾಡಿದ್ದರೆ ಭಾರತ ಎಂದೋ ಮುಂದೆ ಇರುತ್ತಾ ಇತ್ತು..
ಇಲ್ಲಿ VIP ಪ್ರಾಣಕ್ಕೆ ಮಾತ್ರ ಬೆಲೆ... ಒಬ್ಬ ಸಾಮಾನ್ಯ ರೋಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಇರುವುದಿಲ್ಲ... ಆದರೆ ಮಂತ್ರಿ ಮಂತ್ರಿ ಮಕ್ಕಳಿಗೆ ನಟರಿಗೆ ಇಲ್ಲದಿರುವ ಚಿಕಿತ್ಸೆಯು ಇಲ್ಲೇ ದೊರೆಯುತ್ತದೆ. ನಡೆಯದೇ ಇರುವುದು ನಡೆಯುತ್ತದೆ..ಇಟ್ ಹ್ಯಾಪೆನ್ಸ್ ಓನ್ಲಿ ಇನ್ ಇಂಡಿಯಾ... ಜಾತಿ, ಕೆಟ್ಟ ರಾಜಕೀಯ,ಭ್ರಷ್ಟತೆ ಇಲ್ಲದ ಸಮಾಜ ನಮ್ಮದಾಗಬೇಕು... ಯುವ ಜನತೆ ಹೆಚ್ಚಿತ್ತು ಕೊಳ್ಳಬೇಕು...
Prathiyobba prajegu(prajaprathinidhiyu prajeye) tanna karthavyada bagge arividdare inthaha bejavabdaari thanada ghatanegalu nadeyuvudilla.Raajakaaranigalannu aarisida prajeyu inthaha bejavabdaarithanagalannu prashnisabeku. Namma "Raajakeeya" vyavasthe bagge nijakku nanage atheeva besara
Anyway I don't have much to say as Kavya has posted a good observation. I would say we must know what we are voting sarcastically Election has become a choice between bad worse and worst there are no good candidature for the same from leading political parties. We need to face this phase before we are phased out.
You are right it happens only only exclusively in India
ಈಶ ಕುಮಾರ್ ರವರೇ,
ಒಳ್ಳೆಯ ಲೇಖನ. ಅವರವರ ಜವಾಬ್ದಾರಿಯನ್ನು ನಿಭಾಯಿಸದಿದ್ದರೆ ತೊಂದರೆ ತಪ್ಪಿದ್ದಲ್ಲ. ಹಾಗೆಯೇ, ಪ್ರತಿಯೊಬ್ಬ ಪ್ರಜೆಯೂ ನಮಗ್ಯಾಕೆ ಬೇಕು ಅನ್ನೋದನ್ನು ಬಿಡಬೇಕು.
ಚಿತ್ರ
www.vichaaradhaare.blogspot.com
Really good. I like this kind of subject. Prathiyobbaru Subhashchandra bose agbeku aga mathra namma desha uddara agodu.
Reethi
ಈಶ್, ಹೀಗೆ ಸಂಬೋಧಿಸಬಹುದೇ..?
ನಿಮ್ಮ ಲೇಖನ ಓದಿ ನಾನು ಬೆಂಗಳೂರಿಗೆ ಬಂದಿದ್ದಾಗ ಆರೋಗ್ಯಮಂತ್ರಿಗಳು ನಮ್ಮಲ್ಲಿನ ಮೊದಲ ಹಂದಿಜ್ವರದ ಬಲಿಯ ಬಗ್ಗೆ ಹೇಳುತ್ತಾ ಆಕೆಗೆ ಹಲವಾರು ರೋಗಗಳು ಇದ್ದವು ಎಂದು ಸತ್ತ ಅದೂ ಶಿಕ್ಷಕ ವ್ರಿತ್ತಿಯಂಥ ಗುರುತರ ಹುದ್ದೆಯಲ್ಲಿದ್ದ ಹೆಣ್ಣುಮಗಳ ಬಗ್ಗೆ ಹೇಳಿದ್ದು ನಿಜಕ್ಕೂ ಎಷ್ಟು ಬೇಜವಾಬ್ದಾರಿಯುತ ಎನ್ನುವುದು ನೆನಪಾಯಿತು. ಹೌದು ನಮ್ಮಲ್ಲಿ ಕುರ್ಚಿ, ಸ್ವಜನ, ಹಣಕ್ಕಿರುವ ಪ್ರಾಶಸ್ತ್ಯ ಜನಕ್ಕಿಲ್ಲ ಸಾಮಾನ್ಯನಿಗಿಲ್ಲ. ಅವರನ್ನು ಆರಿಸುವ ನಮ್ಮ ಮಟ್ಟ ಮೇಲೇರದ ಹೊರತು ವ್ಯವಸ್ಥೆ ಬದಲಾಗದು. ನನ್ನ ಬ್ಲಾಗ್ ಗೂ ಬನ್ನಿ.
ಈಶ್ ಕುಮಾರ್ ಅವರೆ,
ಒಳ್ಳೆಯ ಲೇಖನ! ಶ್ರೀ ಸಾಮಾನ್ಯನಿಂದ ಹಿಡಿದು, ರಾಜಕಾರಣಿಗಳು, ವೈದ್ಯಾಧಿಕಾರಿಗಳು.. ಎಲ್ಲರೂ ಅವರವರ ಜವಾಬ್ದಾರಿಯನ್ನು ನಿಭಾಯಿಸಿದರೆ ತೊಂದರೆ ತಪ್ಪಿಸಬಹುದಿತ್ತು. ನಮಗೆ ತೊಂದರೆ ಆಗೋವರೆಗೂ ’ನಮಗ್ಯಾಕೆ ಬೇಕ” ಅನ್ನೋ ಮನೋಭಾವ ಮೊದಲು ಹೋಗ್ಬೇಕು.
ಚಿತ್ರ
oLLeya lekhana ellarigu arivu moodisuvantahadu!!!
ಈಶಕುಮಾರ್ ರವರಿಗೆ ನಮಸ್ಕಾರ,
ನೀವು ಪ್ರಸ್ತಾಪಿಸಿರುವ ವಿಚಾರ ಸಮಯೋಚಿತವಾದುದಾಗಿದೆ, ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಸಿಕ್ಕ ಮೇಲಷ್ಟೆ ನಮ್ಮ ಅಡಳಿತಗಾರರಿಗೆ ಅರಿವಾಗಿದೆ. ಈ ಮೇಲೆ ಹಲವರು ಪ್ರತಿಕ್ರಿಯಿಸಿರುವಂತೆ ಒಟ್ಟು ವ್ಯವಸ್ಥೆಯ ಬೇಜವಾಬ್ದಾರಿ ಎದ್ದು ಕಂಡಿರುವುದರಲ್ಲಿ ಅನುಮಾನವೇ ಉಳಿದಿಲ್ಲ.ಸಮಾಜದಲ್ಲಿ ಜಾಗೃತ ಮನಸ್ಸುಗಳು ಹಾಗೂ ಆರೋಗ್ಯವಂತ ವಿಚಾರಗಳು ಇದ್ದಾಗ ಯಾವ ಕಾಯಿಲೆಯು ಏನೂ ಮಾಡಲಾರದು ಅಲ್ವಾ? ಒಳ್ಳೆಯ ಬರಹ ಧನ್ಯವಾದಗಳು.ಅಂದ ಹಾಗೆ ನಾನು ನಿಮ್ಮನ್ನು ಒಮ್ಮೆ ಭೇಟಿಯಾಗಿರಬಹುದು ಅಲ್ವಾ? ಸ್ವಲ್ಪ ನೆನಪಿಸಿಕೊಳ್ಳಿ ಶ್ರೀನಿವಾಸ ಗೌಡರು ನೀವು ಮತ್ತೊಬ್ಬ ಸ್ನೇಹಿತರು ಅರಕಲಗೂಡಿಗೆ ಬಂದಿದ್ದಿರಿ ಡೀಸೆಲ್ ಫಜೀತಿಯಾಗಿ ಹಾಸನಕ್ಕೆ ಹೋಗಿ ವಾಪಾಸ್ ಬಂದು ಮಡಿಕೇರಿಗೆ ಹೋದಿರಿ....
good blog, following your blog - aditya bharadwaja - adiloka.blogspot.com - what do you think of my blog? a new one do send in your feedback. it helps
nimma matu nija....
intha sandharbhadalli charchegaliginthalu.. saamajika kalakale moodisikolluvudu nammelara javabdari annnodu nanna abhipraya..neevenanteeri???
nimma abhiparayavu kahiyaada kadu satya..!!..it happens..only in india....
illi saayuvavaru..naraluvavaru janasaamaanyare horatu...vip galalla..!!!
heegaagi ee nirlakshya..
PRAJGNAMALA
Post a Comment