Thursday, December 10, 2009

ಅರಿವಿರದ ಪಯಣವೇ...












ತೀರದ ಮನದ ಬಯಕೆಗಳು
ಕೊನೆಗಾಣದ ಅಪರಿಮಿತ ಬವಣೆಗಳು
ದಣಿವರಿಯದ ಅನಿಶ್ಚಿತಿತ ದಾಹಗಳು
ಕಣ್ಣ ಅಂಚಿನಲೆ ಬಿಂಬವಾಗಿ
ಕೂತು ಕಾಡುವ ಕಾಮನೆಗಳು
ಕೊನೆ ಕ್ಷಣದವರೆಗೂ ಅಂತಿಮ ತಾಣವ
ಕಾಣದ ಅರಿವಿಲ್ಲದ ಸುಧೀರ್ಘ
ಪಯಣವೇ ಜೀವನವ?



ಬದುಕ ದೋಣಿ ನೀರ ಅಲೆಗಳ ಮೇಲೆ ಅತ್ತಿಂದಿತ್ತ-ಇತ್ತಿಂದಿತ್ತ ತೋಯುತ್ತ, ನನ್ನ ಅಂತಿಮ ತಾಣವೆಲ್ಲೋ ಎಂದು ಮನಸಿನಲ್ಲಿ ಹುಟ್ಟಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೆಂಬಂತೆ ದೂರದ ದಿಗಂತದತ್ತ ಒಂದು ನೋಟ ಬೀರಿ ಅಲ್ಲಿರಬಹುದೇನೋ ನನ್ನ ಜೀವನದ ವಿಶ್ರಾಂತ, ನೆಮ್ಮದಿಯ ತಾಣ ಎಂದುಕೊಳ್ಳುತ್ತ, ತನ್ನ ಮನಸನ್ನು ತಾನೇ ಸಮಾಧಾನ ಪಡಿಸಿಕೊಳ್ಳುತ್ತ ಸಾಗುತ್ತಿತ್ತು. ಎಲ್ಲಿಯೂ ನಿಲ್ಲಲು ಮನಸಿಲ್ಲ, ಪಯಣದ ದಾರಿಯ ಬಿಟ್ಟು ಅಂತಿಮ ನೆಲೆ ಎಲ್ಲೆಂಬುದು ಸ್ಪಷ್ಟವಿಲ್ಲ, ಎಂದಾದರು ಒಂದು ದಿನ ಸಿಕ್ಕಬಹುದೆಂಬ ಆಶಾಭಾವದ ಭ್ರಮೆಯಲಿ ಸಿಲುಕಿ, ಆಶಾಭಾವವೇ ಜೀವನ ಸೆಲೆಯನು ಹೆಚ್ಚಿಸಿ ತನ್ನ ಪಯಣ ಮುಂದುವರೆಸಿದೆ. ಪಯಣ ಮಾತ್ರ ಸಾಗಿದೆ ಅದರ ಮಹತ್ವದ ಅರಿವಿಲ್ಲ. ತನ್ನ ಚೇತನ ಎಲ್ಲಿಯವರೆಗೂ ಮುನ್ನಡೆಸುತ್ತದೋ ಅಲ್ಲಿಯವರೆಗೂ ಸಾಗುತ್ತೇನೆ ಎಂಬ ಸಂಕಲ್ಪ ದೇಹಕ್ಕೆ.

ದೇಹ-ಮನಸುಗಳ ಸಾಂಗತ್ಯವೇ ವಿಭಿನ್ನ. ದೇಹದ ದಣಿವಿಗೆ ಮನಸಿನ ಸ್ಪೂರ್ತಿಯೇ ಔಷದ. ಮನಸಿನ ಅಭಿಲಾಷೆಗಳಿಗೆ ತಕ್ಕಂತೆ ತನ್ನನು ತಾನೇ ಹುರಿದುಂಬಿಸಿಕೊಳ್ಳುತ್ತ, ದೇಹ ಮನಸಿನ ತಾಣದ ಹುಡುಕಾಟದಲ್ಲಿ ಮುನ್ನಡೆಯುತ್ತದೆ. ದೇಹ-ಮನಸುಗಳ ನಡುವಿನ ಸಂಭಂದವೇ ಅಂತಹುದು. ಒಂದು ರೀತಿಯ ಬಿಟ್ಟು ಬಿಡದ ಅವಿನಾಭಾವ ಸಂಭಂದ. ಆದರೂ ವೈರುದ್ಯವಾಗಿ ಅವುಗಳ ನಡೆ. ತನ್ನದೇ ಆದ ಆಕಾರ, ಮೂರ್ತತೆಯ ದೇಹಕ್ಕೆ ತನ್ನದೇ ಈರ್ಷ್ಯೆ, ಬಯಕೆಗಳು ಕಡಿಮೆ ಆದರೇ ಮನಸಿಗೆ ತನ್ನದೇ ಆದ ಮೂರ್ತ ಅಸ್ಥಿತ್ವ ಇಲ್ಲವಾದರೂ ಅದರ ಬಯಕೆಗಳು ಈರ್ಷ್ಯೆಗಳು ಅಪಾರ. ಮನಸಿನ ವಾಂಛೆಗೆ ಮಿತಿಯೇ ಇಲ್ಲ. ಅಂತಹ ಮನಸನ್ನು ಸಾವಧಾನದ ಸ್ಥಿಥಿಯಲ್ಲಿರಿಸುವುದು ಅಸಾಧ್ಯದ ಸಂಗತಿ ಮತ್ತು ಮಾನವನಿಗಿರುವ ಬದುಕಿನ ಹೋರಾಟ.

ಜೀವನವೆಂಬ ನಿತ್ಯ ಚಲನೆಯಲಿ ದೇಹ-ಮನಸುಗಳ ಮಿಳಿತದ ಸಾಗಾಟವಿದ್ದರು ಮೂರ್ತ ರೂಪದ ದೇಹದ ಚಟುವಟಿಕೆಗಳಿಗೆ ಮನಸಿನ ಅಮೂರ್ತ ಶಕ್ತಿಯ ಬೆಂಬಲ ಅಪಾರ. ಬದುಕಿನ ನಿರಂತರ ಯುದ್ದದಲಿ ಎಂಬಿಡದೆ ಸೈನಿಕರಂತೆ ಕಾದಾಡುತ್ತ ಸಾಗುವ ಮಾನವನ ಎರಡು ಶಕ್ತಿಗಳು ಅವನ ಸೋಲು-ಗೆಲುವು, ಏಳು-ಬಿಳುಗಳಲ್ಲಿ ಮಹತ್ವದ ಪಾತ್ರದಾರಿಗಳು. ದೇಹ-ಮನಸುಗಳು ಎರಡು ನಮ್ಮಯ ಏಳು-ಬಿಳುಗಳಿಗೆ ಕಾರಣವಾದರು ಅವುಗಳಿಂದ ಉಂಟಾಗುವ ಸುಖ-ದುಖಗಳಲ್ಲಿ ಮನಸಿನ ಭಾಗಿತ್ವವೇ ಅಧಿಕ. ನಮ್ಮ ಸೋಲು-ಗೆಳವುಗಳಿಗೆ ಮನ ಸಂವೇದನೆಯಾಗಿ ವರ್ತಿಸುತ್ತದೆ. ಎಲ್ಲ ಫಲಾನುಫಲಗಳನ್ನು ಮನಸು ಅನುಭವಿಸುತ್ತದೆ. ಸಾಂಘಿಕ ಕಾರ್ಯದಲ್ಲಿ ಅಮೂರ್ತ ಚೇತನವಾದ ಮನಸಿನ ಕಾರ್ಯ ಅಧಿಕ. ಮಾನವ ಜೀವನದ ಏಳಿಗೆಯಲ್ಲಿ ಸದೃಢ ಮನಸು ಕೆಲಸ ಮಾಡುತ್ತದೆ. ಅದರಿಂದಾಗಿಯೇ ನಮ್ಮ ಮನಸನ್ನು ಸದೃಢ ಗೊಳಿಸಿಕೊಂಡು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ನಮ್ಮಯ ಜೀವನ ಯಾನ ಸಾಗಲಿ...

12 comments:

Ravindra said...

Nice one....

Unknown said...

Dear Eesha..

Its really good phrase. related to soul..n body..

keep writing.. all the best ..

regards
Meena Spoorthy.

ondu tunuku said...

manasu mattu deha 2 ralli mansina pattrave hechhu durbala dehadallu sadrda manasu, aa dehakke chitannyvannu, spurtiyannu tumbutte.. thats MANASU
channagi barediddira.

Ittigecement said...

ಈಶುಕುಮಾರ್....

ಒಳ್ಳೆಯ ಲೇಖನ...
ಚಿಂತನೆಗೆ ಹಚ್ಚಿಬಿಡುತ್ತದೆ...

ಇದು ನಿಮ್ಮ ಓದು, ಜ್ಞಾನದ ಆಳವನ್ನು ತಿಳಿಸುತ್ತದೆ...

ಉತ್ತಮ ಲೇಖನಕ್ಕಾಗಿ ಅಭಿನಂದನೆಗಳು...

ಸೀತಾರಾಮ. ಕೆ. / SITARAM.K said...

ತಮ್ಮ ಚುಟುಕು ಬಹು ದೊಡ್ಡ ಆ೦ತರ್ಯವನ್ನೇ ತೆರೆದಿಡುತ್ತದೇ- ಮಾನವನ ಹುಟ್ಟಿನಿ೦ದ ಸಾವಿನ ವರೆಗಿನ ಪಯಣದ ಮೂರ್ತ-ಅಮೂರ್ತಗಳ ಮಧ್ಯದ ಬವಣೆ ಪುಟಿದೆದ್ದಿದೆ ಕೆಲವೇ ಶಬ್ದಗಳಲ್ಲಿ.
ತಮ್ಮ ಚಿತ್ರ ಹಾಗೂ ವಿವರಣೇ ಚುಟುಕಿನ ವ್ಯಾಪ್ತಿ ಮತ್ತು ಹರುವನ್ನು ಹೆಚ್ಚಿಸುತ್ತದೆ.

Shashi jois said...

ಚೆನ್ನಾಗಿತ್ತು ಲೇಖನ .ನಿಮ್ಮ ಅರಿವಿಲ್ಲದ ಅಂತಿಮ ಕಾಣದ ಸುಧೀರ್ಘ ಪಯಣದ ಜೀವನ ತುಸು ಯೋಚನೆ ಮಾಡುವ ಹಾಗೆ ಮಾಡಿತು.

Anonymous said...

ತೀರದ ಮನಸ್ಸಿನ ಬಯಕೆಗಳು, ಕೊನೆಗೂ ಬಯಕೆಗಳು ಬಯಕೆಗಲಾಗೆ ಉಳಿಯುತ್ತವೆ ಅದನ್ನು ಪಡೆಯುವ ತವಕದಲ್ಲಿ ದನಿವರೆಯದ, ಕೊನೆಗೂ ಬಯಕೆಗಳು ಬಯಕೆಗಲಾಗೆ ಉಳಿದಾಗ ಅದು ಈಡೇರದೆ ಆ ನೋವಲ್ಲಿ ಕಣ್ಣ ಕೊನೆಯಲ್ಲಿ ಕಣ್ಣೀರಾಗಿ ಕೂತು ಕಾಡುವ ಆಸೆಗಳು (ಕಾಮನೆಗಳು) ಕೊನೆಯವರೆಗೂ ಅದಕ್ಕೊಂದು ನೆಲೆ ಕಾಣದೆ ಸಾಗುವ ಪ್ರಯಾಣವೇ ಜೀವನ - ಜೀವನದ ಸಾರಾಂಶ ಇಲ್ಲಿ ಚೆನ್ನಾಗಿ ಮೂಡಿ ಬಂದಿದೆ.

udaya said...

Nice one...

lakshmi said...

ಸುಖ-ದುಖಗಳಲ್ಲಿ ಮನಸಿನ ಭಾಗಿತ್ವವೇ ಅಧಿಕ. ನಮ್ಮ ಸೋಲು-ಗೆಳವುಗಳಿಗೆ ಮನ ಸಂವೇದನೆಯಾಗಿ ವರ್ತಿಸುತ್ತದೆ. ಎಲ್ಲ ಫಲಾನುಫಲಗಳನ್ನು ಮನಸು ಅನುಭವಿಸುತ್ತದೆ. ಆ ಸಾಂಘಿಕ ಕಾರ್ಯದಲ್ಲಿ ಅಮೂರ್ತ ಚೇತನವಾದ ಮನಸಿನ ಕಾರ್ಯ ಅಧಿಕ.
ನಮ್ಮ ಮನಸನ್ನು ಸದೃಢ ಗೊಳಿಸಿಕೊಂಡು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ನಮ್ಮಯ ಜೀವನ ಯಾನ ಸಾಗಲಿ...
ಈ ಮೇಲೀನ ಸಾಲುಗಳು ನನಗೆ ಹಿಡಿಸಿದವು
ನಿಮ್ಮ ಲೇಖನ ದೇಹ-ಮನಸುಗಳ ಸಾಂಗತ್ಯ ತುಂಬಾ ಚೆನ್ನಾಗಿ ಮುೂಡಿ ಬಂದಿದೆ

shivu.k said...

ಈಶಕುಮಾರ್,

ಆಧ್ಯಾತ್ಮಿಕ ಚಿಂತನೆಯ ದೃಷ್ಟಿಕೋನದಿಂದ ಬರೆದ ಲೇಖನ ನಮ್ಮನ್ನು ಚಿಂತನೆ ಹಚ್ಚುವಂತೆ ಮಾಡುತ್ತದೆ....ಬರಹ ಇಷ್ಟವಾಯಿತು.

Anonymous said...

ಉಫ್. ಚಿಂತನೆಗೆ ಒಳಗಾದೆ ಅಂದ್ರೆ ತಪ್ಪಾಗಲಾರದು ಈಶ. ಬರಹ ಹಿಡಿಸಿತು.

ದೀಪಸ್ಮಿತಾ said...

ಬರಹ ತುಂಬಾ ಚೆನ್ನಾಗಿದೆ