Wednesday, August 5, 2009

ಹೀಗೊಂದು ಹನಿಗವನ


ಕೆಲದಿನಗಳ ಹಿಂದೆ ನಾ ಹೋಗುವ ದಾರಿಯಲಿ

ನಡೆದ ಒಂದುಚಿಕ್ಕ ಮತ್ತು ಮನಸಿಗೆ ಯಾಕೋ ಮಾಮೂಲಿ ಎನಿಸದ,ನಮ್ಮ ಬುದ್ದಿಮತೆ ಗ್ರಹಿಸುವ ನಡೆಗೆ ವಿರೋಧವಾಗಿ ಕಂಡಿದ್ದರಿಂದಲೋ ಏನೋ ನನಗೆ ಇಂತಹ ವಿಡಂಬನೆಯ ಕವನದ ಸಾಲುಗಳು ಮೂಡಿದವೆನ್ನಿ. ಹೀಗೆ ಹೇಳಿ ಕವನದ ವಿಷಯ ಅಭೂತವದುದು ಎಂದು ತಿಳಿಸುವುದು ನನ್ನ ಮಾತಿನ ಉದ್ದೇಶವಲ್ಲ. ಅದೊಂದು ಸರ್ವೇ ಸಾಮನ್ಯವಾಗಿ ನಮ್ಮ ಕಣ್ಣೆದುರಿಗೆ ಜರುಗುವ ಸಂಗತಿ ಅಂದು,'ನನಗೆ ವಿಚಿತ್ರ 'ಎನಿಸುವ ಹಾಗೆ ಆ ಕ್ಷಣಕೆ ಜರುಗಿತು ಅಷ್ಟೆ.




ನಾಸ್ತಿಕತೆ ಮನದಲಿ ಅಂಕುರವಾಗಿ ದಶಕಗಳೇ ಕಳೆದಿದ್ದರೂ,ನಮ್ಮ ಆಚಾರ ವಿಚಾರಗಳ ಭಾವವೋ, ನಮ್ಮ ಸಂಸ್ಕೃತಿಯನಿಮಿತ್ತ ಸಾಗಿ ಬಂದ ಪರಂಪರತೆಯ ವಿಧಾನವೋ, ನಮ್ಮಸುತ್ತಲಿನ  ಅದರಲೂ ಪೂಜೆ,ದೇವರು,ದೇವಸ್ಥಾನಗಳ ವಿಚಾರಗಳು ಒಂದು ನಮೂನೆಗೆ ಹೊಂದಿಕೊಂಡಿರುತ್ತವೆ ಎಂಬುದು ನಮ್ಮ ಮನದ ಒಪ್ಪಿತ ಮುದ್ರೆಯಾದುದರಿಂದಲೋ ಈ ಹನಿಗವನ ಮೂಡಿದೆ ಅಷ್ಟೆ.


ಅಲೌಕಿಕತೆಯ ಭಕ್ತಿ-ಭಾವದ ವ್ಯಕ್ತತೆ ಹೀಗೆ ಆಗಬೇಕ? ಆಗಬಾರದ? ಅಥವಾ ಸರಿ ಯಾವುದು,ತಪ್ಪಾವುದು ಎಂದು ವಿಶ್ಲೇಷಿಸುವ ಧೋರಣೆಯು ನನ್ನದಲ್ಲ.


ಮನದಲಿನ ಭಕಿಭಾವವೇ ಮುಖ್ಯವಾದರು ಆ ವ್ಯಕ್ತತೆಯಲಿ ನಾ ಕಂಡ ನವ್ಯತೆ ಈ ಹನಿಗವನದಲ್ಲಿದೆ ಅಷ್ಟೆ.ಕವನ ಓದಿದ ನಂತರ ಏನೇ ಅನಿಸಿದರೂ ಮುನಿಸು, ಮುಜುಗರವನು ಪಕ್ಕಕಿಟ್ಟು ನಿಮ್ಮ ಅಭಿಪ್ರಾಯ,  ವಿಮರ್ಶೆಯನ್ನ ಬರೆಯಿರಿ ಸ್ನೇಹಿತರೆ..



ಮಾಡ್ರನ್ ಭಕ್ತೆ

ತೆಳ್ಳಗೆ ಬಳುಕುತಿರುವ ದೇಹ
ಚರ್ಮ ಕಂಟಿರುವ ಟೈಟ್ ಜೀನ್ಸು
ಬಿಗಿದುಕೊಂಡಿರುವ ಬ್ರಾಂಡೆಡ್
ಟಾಪ್ ನ ಹುಡುಗಿ
ತನ್ನ ಬಾಯ್ ಫ್ರೆಂಡ್ ನ
ಸೊಂಟವನುಬಳಸಿ
ಬಿಗಿದಿಡಿದು,

ಸರ್ರನೆ ನುಗ್ಗುವ ಬೈಕಿನ
ಓಟಕೆ ಅವಳ ನೀಳಕೇಶ
ಗಾಳಿಯಲಿ ತೂರಾಡಲು
ಕಪ್ಪು ಕೂಲಿಂಗ್ ಗ್ಲಾಸ್
ಒಳಗಿನ ಅವಳ ಮಾದಕ
ಕಣ್ಣುಗಳು ದಾರಿ ಬದಿಯ
ದೇವರ ಗುಡಿಯ ಕಂಡೊಡನೆ
ಮನ ಶ್ರದ್ದ ಭಕ್ತಿಯಲೇ
ನಮಿಸಿತು.



8 comments:

banavaseheltiddini said...

tamaahe alwa? madran dress haakiroru mansu sampradaayikavaagirabahudalwa? kavana yochisohange maadide.. saamanyavaagi naavu henge andre modren janara mansu modren ankondirteevi:-)

ಶ್ರೀನಿವಾಸಗೌಡ said...

ಹೌದಾ, ಯಾರದು, ನಿನ್ನ ಗರ್ಲ್ ಪ್ರೆಂಡಾ..

udaya said...

ದೇವರನ್ನು ಓಲೈಸುವ ಯತ್ನ... ಮನ ದೇವರನ್ನು ಭಯದಿಂದಲೋ ಅಥವಾ ಭಕ್ತಿಯಿಂದಲೋ ನಮಿಸುತ್ತದೆ ಮಾಡ್ರನ್ ಕಾಲದಲ್ಲೂ...

ಗೋವಿಂದ್ರಾಜ್ said...

ಇಂಡಿಯಾ ನಲ್ಲಿ ಜನರ ಮನಸು ಮನವೀಯಥೆಗಿಂತ ದೇವ ದೆವಿಯರೆಡೆಗೆ ಒಲಿಯುತ್ತದೆ...ಹಸಿದವಗೆ ನಾಲ್ಕನೆ ಎಸೆಯದ ಜನ ಗುಡಿಯಲ್ಲಿ ನೋಟಗಳ ಹುಂಡಿಗೆ ಇಲಿಯ ಬಿಡುತ್ತಾರೆ..ವಿಪರ್ಯಾಸ ಎನಿಸಿದರೂ...ಸತ್ಯ...ನೀನು ಅಕ್ಷರದಲ್ಲಿ ಕಟ್ಟಿಕೊಟ್ಟ ರೀತಿ ಸುಂದರ...

ಸೀತಾರಾಮ. ಕೆ. / SITARAM.K said...

Nice

kavya H S said...

hanigavana chennagide,odi nagu bantu,papa avala appa amma daarili ellu sigade irli antha bedikondaleno

Anonymous said...

hettana maamar hettana kogile ettanadindetta sambadavayya?

obama mattu shreekrishna

Anonymous said...

ನಾವು ಮಾಡ್ರನ್ ಯುಗದಿಂದ ಬಹು ದೂರ ಬಂದಿದ್ದೇವೆ. ಬೈಕ್ ಮೇಲೆ ಹಾಗೆ ಕುಳಿತ ಹುಡುಗಿ ನಮಿಸುತ್ತಾಳೆ ಎಂಬುದನ್ನು ನಂಬುವುದು ಅಸಾಧ್ಯ. ಬಹುಷಃ ದೇವರೇ ಅವಳಿಗೆ ನಮಿಸುತ್ತಾನೀನೋ?!!! ಈಶರವರು ತಮ್ಮ ಮೂರನೇ ಕಣ್ಣನ್ನು ಒಮ್ಮೆ ತೆಗೆದು ನೋಡಬೇಕು.
shathamana@wordpress.com