Friday, July 31, 2009

ಗಾಡಿ ಬುಲಾರಹೀ ಹೇ..ಸೀಟಿ ಬಜಾರಹೀ ಹೇ..










ನಮ್ಮ ಊರಿನಲ್ಲಿ ಅಂತಹ ರೈಲುಗಾಡಿಗಳಿಲ್ಲವಲ್ಲ ಎಂಬ ಬೇಸರ, ಅಲ್ಲಿಯ ಜನರ ವಿಭಿನ್ನ ಅನುಭವಗಳೆಡೆಗೆ ಹೊಟ್ಟೆ ಬುರುಕುತನ ನನ್ನಲಿನ್ನು ಏಕೋ ಹಾಗೇ ಉಳಿದುಬಿಟ್ಟಿದೆ. ದೇಶದ ಉದ್ದಗಲದಿಂದಲೂ ಬಂದು ಬಂದು ಎಲ್ಲೆಂದರೆಲ್ಲಿ ಬರಿ ಮನುಷ್ಯರೇ ತುಂಬಿ ಹೋಗಿರುವ ಮುಂಬೈ ನಗರಕೆ ನನ್ನ ಭೇಟಿಯೇ ಒಂದು ಆಕಸ್ಮಿಕ.
ಚಿಕ್ಕಂದಿನಿದಲೇ ಅದೊಂದು ನಗರದ ಬಗ್ಗೆ ಸುಮ್ಮಸುಮ್ಮನೆ ಭಾರೀ ದಂತಕಥೆಗಳನ್ನ ಕೇಳಿದ್ದೆ. ನಮ್ಮೂರಿನಲ್ಲಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಬಹಳಷ್ಟು ಹುಡುಗರು ಮುಂಬಯಿಗೆ ಹೋಗಿ ಅಲ್ಲಿಯ ಹೋಟೆಲು, ಬಾರುಗಳಲ್ಲಿ ಚಾಕರಿ ಮಾಡಿ ದುಡ್ಡು ದುಡಿದು ಹಬ್ಬ ಹರಿದಿನಕ್ಕೆ ಊರಿಗೆ ಬಂದಾಗ ದಿವಾನರಂತೆ ಓಡಾಡುತಿದ್ದವರ ಬಗ್ಗೆ ಅವ್ವ(ಅಜ್ಜಿ) ಹೇಳುತಿದ್ದುದು 'ಬೊಂಬಾಯಲಿ ಚೆನ್ನಾಗಿ ದುಡ್ಡ್ ಮಾಡ್ಕೊಂಡು ಬಂದವ್ನೇ ತಗೋ ಅವನಿಗೇನು ದೌಲತ್ತಾಗಿ ತಿರುಗುತ್ತಾನೆ ಇಲ್ಲಿ ಅನ್ನೋರು'.
ಹೀಗೆ ಬಾಂಬೆಯ ಬಗ್ಗೆ ತರಾವರಿಯಾಗಿ ಕೇಳಿಯೆ ಕುತೂಹಲಿಯಾಗಿದ್ದ "ಕಾರ್ಮಿಕರ ಕೈಲಾಸವಾದ ಮುಂಬೈ"ನಗರಿಯನು ನೋಡಬೇಕೆಂಬ ಅಲೆಮಾರಿಯ ಹಂಬಲ ಕಳೆದ ವರ್ಷ ಸಾಕಾರವಾಹಿತು.ಹಲವು ವಿಚಿತ್ರ, ವಿಕ್ಷಿಪ್ತ, ವೈಶಿಷ್ಟ್ಯಗಳಿಗೆ ಹೆಸರಾಗಿದ್ದರು ಮುಂಬೈನ 'Local Train' ವ್ಯವಸ್ಥೆಯೇ ನನಗೆ ಅದ್ಭುತವೆನಿಸಿದ್ದು.ಎಡಬಿಡದೇ ಮುಂಬೈ ನಾಗರಿಕರನ್ನು ಹೊತ್ತು ಸಾಗುವ ಸಂವಹನ Local train ಎಂಬ ಗರೀಭಿ ರಥದ ವೈಶಿಷ್ಟ್ಯವನ್ನು ನಾ ಕಂಡಂತೆ ನಿಮಗೆ ಹೇಳಬೇಕೆನಿಸುತ್ತದೆ. ರೈಲು ಲೋಕಲ್ ಆದರೂ, ಅದರ ವೈವಿಧ್ಯತೆ ಮಾತ್ರ 'Local' ಎಂದು ನಿಮಗನಿಸುವುದಿಲ್ಲ ಎಂಬುದು ನನ್ನ ನಂಬಿಕೆ ಸ್ನೇಹಿತರೆ.


ದುಡಿಯುವವರ ನಗರವೆಂದೇ ಖ್ಯಾತಿಯಾದ ಮುಂಬೈಯನ್ನು ಪೂರ್ವ-ಪಶ್ಚಿಮ ಮುಂಬೈ ಎಂದು ಸೀಳು ಮಾಡಿರುವ ಹಳಿಗಳ ಮೇಲೆ ಜಗದ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ದಿನಂಪ್ರತಿ ಸವೆಸಿಯು ಸವೆಸದ ಹಳಿಗಳ ಮೇಲೆ ಅತ್ತಿಂದಿತ್ತ ಅಡ್ಡಾಡುತ 'ಮಾನವ ಸಂಪರ್ಕ ಸೇತುವೆಯಾಗಿರುವ' local train' ಎಂಬ ಆಧುನಿಕ ಅನ್ವೇಷಣೆಯು ನಿಜಕ್ಕೂ "ಮುಂಬೈ ಎಂಬ ದೇಹಕ್ಕೆ ರಕ್ತನಾಳವಿದ್ದಂತೆ".ಒಂದಿಲ್ಲೊಂದು ಕಾರಣಕ್ಕೆ ಮುಂಬೈ ನಿವಾಸಿಗರ ಜೀವನದಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ರೈಲು ಬಂಡಿಗಳು,ಪ್ರದೇಶ-ಪ್ರದೇಶಗಳ ಜೊತೆಗೆ ಮಾನವರ ನಡುವೆಯು ಸಂಪರ್ಕ,ಸಂಬಂಧಗಳನು ನಿರ್ಮಿಸುತ್ತಲೇ ಸಾಗಿದೆ.
ಎಲ್ಲಿ ಸಂಪರ್ಕ ಸಂವಹನಗಳ ಸೌಲಭ್ಯ ಉತ್ತಮವಾಗಿರುತ್ತದೋ ಅಲ್ಲಿ ಮಾನವನ ಸಂಬಂಧಗಳು ಉತ್ತಮವಾಗಿ ಬೆಳೆಯುತ್ತವೆ ಅನ್ನೋದಕ್ಕ್ಕೆ ಬಾಂಬೆಯ ಜನ ಜೀವನ ಸ್ವರೂಪವೇ ಸಾಕ್ಷಿ.ಬಡವರು,ಕಾರ್ಮಿಕರು,ಕಾಲೇಜು ಹುಡುಗ ಹುಡುಗಿಯರು, ಶೋಕಿಗಾಗಿ ಊರು ಸುತ್ತುವವರು ಹೀಗೆ ಯಾರು-ಯಾರೋ ರೈಲಿನ ಬೋಗಿಯೊಳಗೆ ಸೇರಿ ತಮ್ಮ ನೀವೆದನೆಗಳೊಂದಿಗೆ ಎದುರಿಗಿರುವವರನ್ನು ಮಾತಿಗೆಳೆಯುತ್ತ ಪಯಣವನು ಹಗುರಗೊಳಿಸಿಕೊಳ್ಳುತ್ತ ಸಾಗುವ ಅವರ ಅನುದಿನದ ಪಯಣ, ಅಂಟುರೋಗವೆಂಬಂತೆ ದಿನವೂ ಒಬ್ಬ ಅಪರಿಚಿತನನ್ನಾದರು ಮಾತಿಗೆಳೆಯುತ್ತದೆ. ಆ ಕ್ಷಣದ ಮಾತಿಗಸ್ಟೇ ಸ್ಪಂಧಿಸುವ ಅವರ ಮಾತುಗಳು,ಆಪ್ತತೆಗೆ ನಮಗಾಗೋ ಅ ಅನುಭವವೇ ಅಭೂತವೆನಿಸುವುದು.
ಎಲ್ಲರು ಯಾವುದೋ ಅವಸರಕ್ಕೆಬಿದ್ದವರಂತೆ,ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಅವರ ಬಾಳಿನಲಿ ಹಾಸುಹೊಕ್ಕಿರುವ ರೈಲು ಬಂಡಿಯ ಒಡನಾಟ ನಮ್ಮನ್ನ ಚಕಿತಗೊಳಿಸುತ್ತದೆ. ರೈಲು ಬರೋದು ಒಂದು ನಿಮಿಷ ತಡವಾದರೂ ಫ್ಲಾಟ್ಫಾರಂ ಮೇಲೆ ನಿಂತು ಚಡಪಡಿಸೋ ಪಯಣಿಗರ ಕಣ್ಣುಗಳು ಹಳಿಗಳೆಡೆಗೆ ಹೊರಳಿ ಕಾತರಿಸುವುದು. ಹಳಿಗಳ ಮೇಲೆ ತ್ರಿವಿಕ್ರಮನಂತೆ ಸಾಗಿ ಬರುವ ರೈಲು, ನಿಲ್ಲುವ ಕೆಲವೇ ಕ್ಷಣಗಳಲ್ಲಿ ಇಳಿಯುವವರೆಷ್ಟೋ,ಹತ್ತುವವರೆಷ್ಟೋ ಕ್ಷಣ ಮಾತ್ರದಲಿ ಎಲ್ಲವೂ ಆಗಿ ಮುಗಿದಂತೆ. ಆಗತಾನೇ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ನಿಲ್ದಾಣ ನಿಮಿಷದಲ್ಲಿಯೇ ಖಾಲಿ ಖಾಲಿ.ಎಲ್ಲರಿಗೂ ಅವರದೇ ಆದ ಅನಿವಾರ್ಯತೆಗಳ ಅರಿವಾಗಿದೆಯೇನೋ ಎನುವಂತೆ ಸುಮ್ಮನಿದೆ ನಿಲ್ದಾಣ.
ಬೆಳಗಿನ ಜಾವದ 6 ರೈಲೋ, ಆಫೀಸಿನ ಸಮಯಕೆ ಹಿಡಿಯಬೇಕಾದ 8 ರೈಲೋ,ಅವಳತ್ತುವ ರೈಲಿಗೆ ಕಾಯುವ ಪುಂಡನ ರೈಲು,ಶಾಲಾ-ಕಾಲೇಜುಗಳಿಗಾಗೆ ವಿದ್ಯಾರ್ಥಿಗಳು ಕಾಯುವ ರೈಲು,ಹೀಗೆ ಯಾವುದಾದರೊಂದು ರೈಲಿನ ಚಲನೆಯೊಂದಿಗೆ ಮುಂಬೈ ವಾಸಿಗಳ ನಿರಂತರ ಯಾನ ಬೆಸೆದುಕೊಂಡಿದೆ. ಸಿಕ್ಕ ಸೀಟಿನ ಮೇಲೆ ಕೂತು ಪೇಪರ್ ಓದುವವರು,ರೇಡಿಯೋ ಆಲಿಸುತ ತಲೆಯಾಡಿಸುವವರು,ಬೆಳಗಿನ ನಿದ್ದೆ ಹರಿಯದೇ ತೂಕಡಿಸುವವರು,ಪ್ರೇಯಸಿಯೋಟ್ಟಿಗೆ ಫೋನ್ ನಲಿ ಹರಟುತ ಸಾಗುವವರು,ಕೆಲಸದ ತೀವ್ರತೆಯನು ಕಡಿಮೆ ಮಾಡಿಕೊಳ್ಳಲು ಅಲ್ಲೇ ತಯಾರಿ ನಡೆಸುವವರು,ಊರ ಸುತ್ತಲು ಹೋರಾಟ ಅನಾಮಿಕರ ಪರಿಪಾಟಲುಗಳು ಹೀಗೆ ಸೀಮೆ ಸೀಮೆಯ ಜನರನೋಳಗೊಂಡ ಸೀಮಾತೀತವೆನಿಸಿದ ಬೋಗಿಗಳ ರೈಲಿಗೆ ಇದೆಲ್ಲ ಮಾಮೂಲಿ ಎನಿಸಿ, ಯಾವುದೇ ಭೇದವಿಲ್ಲದೆ ತನ್ನ ಪಾಡು ತನಗೆಂದು ಸೈರನ್ ಕೂಗುತ ಅಳಿಗಳ ಮೇಲೆ ಚಕ್ರ ಉರುಳಿಸುತ್ತದೆ.
ಒಂದಿಲ್ಲೊಂದು ಕಾರಣಕ್ಕೆ,ವಿಷಯಕ್ಕೆ,ಪಯಣಕೆ, ವಿಶ್ರಾಂತಿಗೆ,ಮಾತಿಗೆ, ಪ್ರೇಮಕೆ, ಸಂಬಂಧಕೆ ಅಲ್ಲಿಯವರ ಮತ್ತ್ಯಾವುದೋ ಅನಿವಾರ್ಯತೆಗೆ Local ಟ್ರೈನ್ ಅವಲಂಬಿಯಾಗಿ ಸಾಥ್ ನೀಡಿವೆ. ಅವರ ಅವಶ್ಯಕೆ ತಕ್ಕಂತೆ ಈ ರೈಲುಗಳು ಅವರೊಂದಿಗೆ ಸಂಬಂಧವನ್ನು ಬೆಳೆಸಿಬಿಟ್ಟಿವೆ. ಆ ಪ್ರಯಾಣಿಕರ ಸ್ಪರ್ಶ,ಅವರ ಉಸಿರು,ಮಾತು, ಅವರ ತುಳಿತ ಎಲ್ಲವನು ತಕರಾರಿಲ್ಲದೆ ಸ್ವೀಕರಿಸುವ, ದಿನಕ್ಕೆ ಒಮ್ಮೆಯಾದರು ಭೇಟಿಯಾಗುವ 'ಪ್ರೇಯಸಿಯಾಗಿ' ಆ ಜನರ,ನಗರದ 'ಚಲನೆಯಜೀವಾಳವಾಗಿ' ರಾರಾಜಿಸುತ್ತಿರುವ ಅಮಾಯಕ ರೈಲುಗಳಿಗೆ ಮನದ ಒಂದು ಸಲಾಂ .ಈ ಎಲ್ಲ ಅನುಭವಗಳು ನಿಮಗೂ ಆಗಲಿ ಮುಂಬಯಿಯ ಒಂದು ಲೋಕಲ್ ಯಾನದಲ್ಲಿ...

14 comments:

Unknown said...

ಮುಂಬೈ ಲೋಕಲ್ ಟ್ರೈನ್ ಬಗ್ಗೆ ಜಯಂತ ಕಾಯ್ಕಿಣಿ ಕಥೆಗಳಲ್ಲಿ ಬಂದಿದ್ದನ್ನು ಓದಿದ್ದೇ, ಈಗ ನೀನು ಬರೆದಿದ್ದೀಯಿ, ಯಾಕೋ ನಂಗೂ ಅನ್ನಿಸುತ್ತಿದೆ, ಮುಂಬೈ ಬುಲಾರಹೀಹೆ, ಸೀಟಿ ಬಜಾರಹೀಹೆ ಅಂತ. ಮತ್ತೊಮ್ಮೆ ಹೋಗೋಣ ಅಲ್ಲಿಗೆ.

ಸಾತ್ವಿಕ್ ಎನ್.ವಿ. said...

ಬಾಂಬೆ ಲೋಕಲ್ ಟೈನ್ ನಲ್ಲಿ ಪುಕ್ಕಟೆ ಪಯಣ ಮಾಡಿಸಿದ ನಿಮಗೆ ನನ್ನಿ.
ಸಾತ್ವಿಕ್

kavya H S said...

nimma baravanige nodidare adu local anta annisuvudilla.a nirjeeva vastuvina bagge enediruva nimma bhaavane sogasaagide mattu nimma vishala manasannu thorisuttade.

ಅರುಣ್ said...

maga baravanige tumbane chennagi ide adre.. story End agilla ansutte...

Anonymous said...

mumbaina..vegada jeevanakke sahakarisuva..mumbai railways..nijavaagiyu mumbainaa jeeevala...nivu baredante adaralli omme payanisi adara gammattannu padeyuva aase hoomide..
PRAJGNAMALA

udaya said...

ರೈಲು ಗಾಡಿ ಹೀಗೆ ಸಾಗುತ ಇರಲಿ... ಮುಂಬೈ ನ ಧೋಣಿ ಹೀಗೆ ಓಡುತ ಇರಲಿ...
ಚೆನ್ನಾಗಿದೆ...ಬರಹ

Anonymous said...

You write well. But keep uniform formatiing in the article. Also lot of spelling mistakes. Eg: ಅಳಿ- ಹಳಿ, ಸಂಭಂಧ-ಸಂಬಂಧ
Good luck.

ಸೀತಾರಾಮ. ಕೆ. / SITARAM.K said...

nice

Jayalaxmi said...

ಆಹಾ! ಮುಂಬೈ ಲೋಕಲ್ ರೈಲ್ ಅನ್ನೊ ನಿಮ್ಮ ನಿಮ್ಮ ಲೇಖನದ ತಲೆಬರಹ ಓದುತ್ತಲೇ ರೋಮಾಂಚನಗೊಂಡು ಟ್ರೈನ್ ಹತ್ತಲು ಓಡಿ ಬಂದೆ ನಿಮ್ಮ ಬ್ಲಾಗಿಗೆ. :) ಕಾರಣ ಲೋಕಲ್ ಟ್ರೈನುಗಳಲ್ಲಿ ಸುಮಾರು ವರ್ಷ ಪಯಣಿಸಿ ಅದರ ನೆನಪನ್ನು ಹೊತ್ತು ಬೆಂಗಳೂರಿಗೆ ಬಂದವಳು ನಾನು.ನಿಮ್ಮ ಲೇಖನ ಓದಿ ಓಡಿ ಬಿಡುವಾ ಮತ್ತೆ ಮುಂಬೈಗೆ ಅನಿಸ್ತಿದೆ ಈಶಕುಮಾರ್ ಅವರೆ.

ಏಕಾಂತ said...

ಹಾಯ್ ಈಶ...
ಪಕ್ಕನೆ ಕಾಯ್ಕಿಣಿ ಕತೆ ನೆನಪಾಯ್ತು. ಚೆನ್ನಾಗಿದೆ ಬರಹ. ಮತ್ತೆ ಬರೆಯಿರಿ...

bilimugilu said...

Hi Esha,
tumbaa oLLe baravaNige. Ishtavaaytu... Mumbai local trainnalle hogi banda anubhava tandide.
kelavu saalugaLu nanage ishtavaadavu. avugalalli e-lines i liked the most :
ಎಲ್ಲಿ ಸಂಪರ್ಕ ಸಂವಹನಗಳ ಸೌಲಭ್ಯ ಉತ್ತಮವಾಗಿರುತ್ತದೋ ಅಲ್ಲಿ ಮಾನವನ ಸಂಬಂಧಗಳು ಉತ್ತಮವಾಗಿ ಬೆಳೆಯುತ್ತವೆ ಅನ್ನೋದಕ್ಕ್ಕೆ ಬಾಂಬೆಯ ಜನ ಜೀವನ ಸ್ವರೂಪವೇ ಸಾಕ್ಷಿ.ಬಡವರು,ಕಾರ್ಮಿಕರು,ಕಾಲೇಜು ಹುಡುಗ ಹುಡುಗಿಯರು, ಶೋಕಿಗಾಗಿ ಊರು ಸುತ್ತುವವರು ಹೀಗೆ ಯಾರು-ಯಾರೋ ರೈಲಿನ ಬೋಗಿಯೊಳಗೆ ಸೇರಿ ತಮ್ಮ ನೀವೆದನೆಗಳೊಂದಿಗೆ ಎದುರಿಗಿರುವವರನ್ನು ಮಾತಿಗೆಳೆಯುತ್ತ ಪಯಣವನು ಹಗುರಗೊಳಿಸಿಕೊಳ್ಳುತ್ತ ಸಾಗುವ ಅವರ ಅನುದಿನದ ಪಯಣ, ಅಂಟುರೋಗವೆಂಬಂತೆ ದಿನವೂ ಒಬ್ಬ ಅಪರಿಚಿತನನ್ನಾದರು ಮಾತಿಗೆಳೆಯುತ್ತದೆ. ಆ ಕ್ಷಣದ ಮಾತಿಗಸ್ಟೇ ಸ್ಪಂಧಿಸುವ ಅವರ ಮಾತುಗಳು,ಆಪ್ತತೆಗೆ ನಮಗಾಗೋ ಅ ಅನುಭವವೇ ಅಭೂತವೆನಿಸುವುದು....
keep writing ri.

vanishri said...

hey.. tumba chennagide....samanya vastu vishesha.. antharalla hage.... baravanige naijavagide......
abhinandanegalu......

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

chennagideri gurugale munduvareyali nimma barahagalu ontaraha aakarshaneyagide....

Mohan said...

nivu yelidu nija,local train nalli anta majasigaboudu, adare aste rush idu,obara kala mele 7 gante nintharu, yenu mathadade, yandu nodada hosabananna, seat kodalilla anta dodda satruvinante kanuva,jana gala nodabekenedre nivu shimogga express nalli prayanisabeku. usuru katute andru kitakiya pakka kutavaru nanage challi agute anthare, swalpa adust madkondre 6 jana kulithukolaboudada seat idru, kelidare seat mele barediruva 4 number matra torisi nodiru nodadante kulithu koluthare, bayi idre matra bombay andavarige bayi idavarige matra shimoga express train anta hosa gade.