ಪಯಣಿಗನ ಆಲಂಗಿಸುವ ತವಕದಿ ಮೈಚೆಲ್ಲಿರುವ ಅಂತ್ಯವಿಲ್ಲದ ಹಾದಿ ತಬ್ಬುವ ನೆಲೆಯ ಹುಡುಕಾಟದಲಿ ಕಳೆದುಹೋಗಿರುವ ಅಲೆಮಾರಿಯು ನಾ........ ದಾರಿ,ಹೆದ್ದಾರಿ,ಕಾಡುಡಾರಿ ಕಾಲುದಾರಿ;ಗಮ್ಯ ಅಗಮ್ಯ ಅರಿವಿಲ್ಲದ ಜೀವನದ ದಾರಿ ಹುಟ್ಟು ಸಾವಿನ ನಡುವೆ ನಡುದಾರಿಯಲಿ ಅಲೆವ ಅಲೆಮಾರಿಯು ನಾ... ಪಥಪಥವೂ ಅನೂಹ್ಯ ಪಥದಲಿನ ಮತವು ನಿಸ್ಪ್ರುಯ್ಯ ಯಕಶ್ಚಿತ್ ಜೀವನಪಥದ ಯಗ್ನಮಾರ್ಗದಲಿ ಅಲೆದು ಸಾವನು ಆಲಂಗಿಸಿ,ನಿಶ್ಚಲವಾಗಿ ಕಳೆದುಹೋಗುವ ಪಯಣಿಗನು ನಾ.... ಈಶಕುಮಾರ್ |
7 comments:
ಎಲ್ಲವನ್ನು ಹೇಳುತ್ತಾ ಏನನ್ನೂ ಹೇಳದಂತೆ ಬದ್ದುಕಿನ ವಿಕ್ಷಿಪ್ಥತ್ಹೆಯನ್ನು ನಿಚ್ಚಳವಾಗಿ ಬಿಂಬಿಸುವ ನಿನ್ನ ಕವಿತೆ ಚೆಂದದ್ದು. "ಸಹಯಾತ್ರೆ" ಹೊರಟಿರುವ ನಿನ್ನೊಂದಿಗೆ ಸಾಗುವಲ್ಲಿ ಎಲ್ಲರು ಜತೆಯಾಗಲಿ...ಪಯಣ ಸುಖವಾಗಲಿ...
" sahayaatri " chennagi moodibandide..nimma kavanagalu..nimma bhaavanegalannu vyaktapadisuvalli prabhaaviyaagive....
-inti tamma preetiya prajgnamala
ಅಣ್ಣ... ಇದು ಬಹು ನಿರೀಕ್ಷಿತ.... ತಡವಾಗಿ ಆರಂಬ ಮಾಡಿದ್ದಿಯ. ಪರವಾಗಿಲ್ಲ.... ನಿನ್ನ ಭಾವಗಳ ತಾಕಲಾಟ ಅಕ್ಷರವಾಗಿ ಮೂಡಲಿ ಓದುವ ನನ್ನ ನಂತವರಿಗೆ ದಿನಾ ಹಬ್ಬವಾಗಲಿ.
ಸಹಯಾತ್ರೆ ಯಲ್ಲಿ ಭಾಗಿಯಾಗಲು ನನಗೂ ಬಹಳ ಹೆಮ್ಮೆಯೆನಿಸುತ್ತಿದೆ...
ಭಾವನೆಗಳ ಬುತ್ತಿ ಹೊತ್ತು , ಜೀವನಾನುಭವದ ಬ೦ಡಿಯಲ್ಲಿ ಯಾ೦ತ್ರಿಕ ಬದುಕಿನ ಜಾತ್ರೆಯಿ೦ದ ಬಲು ದೂರ ಸಾಗತ್ತಿರಲಿ ಈ ಯಾತ್ರೆ ನಿರ೦ತರ , ಹಿ೦ದಕ್ಕೊಡ್ದಿ ಸಾವಿರಾರು ಮೈಲಿಗಲ್ಲು ಗಳ....
- ಪ್ರೇಮಾ
ಕೇವಲ ಕಷ್ಟಗಳ ಕಣ್ಣುಗಳಿಂದ ನೋಡುವ ನಿನ್ನ ಮನದ ಅಂಥರಳದ ಮಾತುಗಳೇ ನಿನ್ನ ಬರವಣಿಗೆ ಅಂತ ನನ್ನ ಭಾವನೆ
ಮನಸನ್ನು ತಟ್ಟುವ ನಿನ್ನ ಬರವಣಿಗೆಗೆ ನಿಜವಾಗಲೂ ಏನೋ ಆಕರ್ಷಣೆ ಇದೆ
baduka halavaaru daari galalli alemaariya chitrana chennagide..
Post a Comment