Saturday, July 25, 2009

ಬಾ,ಬಾರೆನ್ನ ಬಾಳಿಗೆ...

ಒಮ್ಮೆ ಆಲಿಸಿ ನಿಮ್ಮ ಮನದ ಮಾತನು...
ಮೊನ್ನೆ ಹಾಗೆ ಸುಮ್ಮನೆ ಮಾತನಾಡುತ್ತ ಅಮ್ಮ 'ಆಷಾಢ ಕಳೆಯಿತು' ಅಂದಳು, ಯಾವುದೋ ಅನಿಷ್ಟ ತೊಲಗಿದಾಗ ಹೇಳುವ ರೀತಿ ಇತ್ತು ಅವಳ ಮುಖಭಾವ.ನಮ್ಮ ಜನಗಳದ್ದು ಒಂದು ರೀತಿಯ ಮಲತಾಯಿಧೋರಣೆ ಆಷಾಢದ ಬಗ್ಗೆ ಅದೇಕೋ ಏನೋ ನನಗಂತೂ ತಿಳಿಯದು? ಜನ್ಮ ಜನ್ಮಾಂತರದ ಯಾವುದೋ ಹಳೆ ವೈಷಮ್ಯವೇನೋ ಎಂಬಂತೆ ಯಾವುದೇ ಶುಭ ಕಾರ್ಯಗಳನ್ನ ಮಾಡೋದೇ ಇಲ್ಲ. ಗಾಳಿ ತನ್ನ ದಿಕ್ಕನ್ನ ಬದಲಿಸಿ ಬರೋದರಿಂದ ಯಾವುದೋ ಅಪಶಕುನ ತಮ್ಮ ಮೈಮೇಲೆ ಎಗರಿಬಿಡುತ್ತದೆ ಎಂಬಂತೆ ಆಷಾಢ ಮಾಸವನ್ನು ಜನಗಳು ದೂಷಿಸುವ ಪರಿಯಂತೂ ನಗು ತರಿಸುವುದು. ಇನ್ನು ಆಷಾಢದಲಿ ಅಗಲಿದ ನವ ದಂಪತಿಗಳ ಪಾಡು ದೇವರೇ ಬಲ್ಲ.
ಆಷಾಢದ ಗಾಳಿ ಎಲ್ಲೆಲ್ಲು ಮಳೆಯ ಸುರಿಸಿ ಮೆಲ್ಲನೆ ಸರಿದಿದೆ. ನವ ದಂಪತಿಗಳ ಮೇಲೇರಿದ್ದ ಸಂಪ್ರದಾಯ ಕಟ್ಟಳೆಯ ತಾತ್ಕಾಲಿಕ ಅಗಲಿಕೆಯ ದಿನಗಳು ತುಂಬಿ, ದಂಪತಿಗಳು ಕೈ ಕೈ ಜೋಡಿಸಿ, ಅಳೆದು ತೂಗಿ ಹೆಜ್ಜೆಗಳನಿಡುತ ಸೊಂಪಾದ ಸಂಜೆಯಲಿ ವಿಹರಿಸುವ ಸುಸಮಯ ಮತ್ತೆ ಅವರ ಹರಸಿ ಬಂದಿದೆ.
ಬಂದಿದೆ ಶ್ರಾವಣ. ಶ್ರಾವಣದ ತಿಳಿಗಾಳಿ ಬುವಿಯಲೆಲ್ಲ ಹರಡಿ, ಸೊಬಗ ಸೂಸುವ ಹೂ, ಬಳ್ಳಿ, ಗಿಡಗಳ ವಯ್ಯಾರಕ್ಕೆ ಮನದಲ್ಲೂ ಕಂಪನ. "ಶ್ರಾವಣ ಬಂತು ಕಾಡಿಗೆ,ಬಂತು ನಾಡಿಗೆ"ಎಂದು ಹಾಡಿದ ಕವಿ ಬೇಂದ್ರೆಯ ಪದ್ಯ ನೆನಪಾಗುವುದು. ಹಸಿರು ಹಸಿರಾಗಿ ಕಂಗೊಳಿಸುವ ಭೂರಮೆ ಪ್ರಣಯ ರಾಗವ ಹಾಡಿ ಕರೆಯುತಿಹುದೇನೋ ಎನ್ನುವಂತೆ ಶ್ರಾವಣ ಮಾಸದ ಸೆಳವು.ಸುತ್ತಲು ಯಾವುದೋ ಆಕರ್ಷಣೆ ನಮ್ಮ ಸೆಳೆದಂತೆ. ಮನದಲ್ಲೂ ಯಾವುದೋ ಮೋಹ ನಿಮ್ಮ ಆವರಿಸುತಿದೆ ಎನುವ ಹಾಗೇ ಭಾಸವಾಗುತ್ತಿಲ್ಲವೇ....ಒಮ್ಮೆ ಆಲಿಸಿ ನಿಮ್ಮ ಮನದ ಮಾತನು...

ಬಾ,ಬಾರೆನ್ನ ಬಾಳಿಗೆ...

ಸಾಕು ಸಾಕೆನಗೆ ಒಮ್ಮೆ
ಮುನಿಸ ಕೊಂಕು ನೋಟದ ಬಿಂಕವ ಬದಿಗಿಟ್ಟು,
ಮಂಜಿನ ಹನಿ ಹಸಿರ ಗರಿಕೆಯ ಮುತ್ತಾಗುವ
ಮುಂಜಾವದಲಿ ಒಲುಮೆ ಲಜ್ಜೆಯ ನಿನ್ನ
ಹಾಲಗೆನ್ನೆಯ ಮೇಲೇರಿಸಿ ಬಂದುಬಿಡೆನ್ನ ಬಾಳಿಗೆ..

ಉದಯ ರವಿಯ ಎಳೆರಶ್ಮಿಗಳು ಎನ್ನ
ಮನೆಯಂಗಳದಲಿ ಬೆಳಕು ಚೆಲ್ಲುವ
ಆ ಸವಿ ಹೊತ್ತಲಿ ಸೋತವನ ಬಾಳ
ದೀವಿಗೆಗೆ ನಲುಮೆಯ ಬತ್ತಿ ಹೊಸೆದು
ಹರುಷದ ಹೊನಲ ಉಣಿಸಿ, ಹರಿಸಬಾರೇ..

ವಿರಹದುರಿಯಲಿ ಬೆಂದ ಮನಕೆ
ಬಿಡದೆ ಸುರಿವ ಶ್ರಾವಣದ ಸಂಜೆ ಮಳೆಯ
ತಂಪ ಹೊತ್ತು ತಾರೆನ್ನ ಬಾಳಿಗೆ,
ಒಮ್ಮೆ ನಿನ್ನ ಒಲವ ಹೂವೊಡಲ
ಚಂದ್ರಿಕೆಯ ಸವಿಯ ಅಮಲಿನಲಿ ತೇಲಾಡಿ,
ನಿನ್ನ ಮಡಿಲಲಿ ಪವಡಿಸಿ ನಾ ಯಾರೆಂಬುದ
ಮರೆತರಸ್ಟೇ ಸಾಕು!ಬಾ ಬಾರೆನ್ನ
ಬಾಳಿಗೆ ಮನದಲಾದ ಗಾಯದ ನೊವೆ
ಮಾಸಿ ಹೋಗುವ ಮುನ್ನ.....






12 comments:

Unknown said...

ಬಾ ಬಾರೆನ್ನ ಬಾಳಿಗೆ ಆಷಾಡ ದಿಕ್ಕರಿಸಿ..
ತುಳುಕುತ ಬಾರೆ,
ದುಮುಕುತ ದುಮ್ಮಿಕ್ಕುತ ಬಾರೆ..

ಬಾರೆನ್ನ ಬಾಳಿಗೆ ವಯ್ಯಾರದಿ ಬಾರಿ
ಸಿಂಚನ ತಾರೆ..
ಸಿರಿಯನು ದಾರೆ ...
ಸಿರಿ, ಬಾರೆ, ಗೌರಿ ಬಾರೇ, ಲಕ್ಷಿ ಬಾರೆ,
ಎಲ್ಲಾರು ಬನ್ನಿರೇ ಪ್ರೀತಿ ತನ್ನಿರೇ

ಬಾ ಬಾರೆ ಪ್ರಿಯರೇ
ಬಾರೆನ್ನ ಬಾಳಿಗೆ... ಬೆಳಕು ತನ್ನಿರೇ...

ನಿನ್ನ ಕವಿತೆ ಓದಿ ಅದೇ ಕ್ಷಣ ಕವಿಯಾದೇ ಕಣಯ್ಯಾ..
ನಾನು ಕರೆದಿದ್ದೇನೆ ಎಲ್ಲಾರನ್ನ...
ಬರಲಿ ಬಿಡು ಈಗ ಶ್ರಾವಣ ಅಲ್ವಾ...

ಒಂದೇ ಪದದಲ್ಲಿ ನಿನ್ನ ಕವಿತೆ ಸೂಪರ್ರೋ ಸೂಪರ್...

RAK said...

chennagide nimma ee kavana.....

udaya said...

ಹಸಿರು ಹಸಿರಾಗಿ ಕಂಗೊಳಿಸುವ ಭೂರಮೆ ಪ್ರಣಯ ರಾಗವ ಹಾಡಿ ಕರೆಯುತಿಹುದೇನೋ ಎನುವಂತೆ ಶ್ರಾವಣ ಮಾಸದ ಸೆಳವು.

ಮಂಜಿನ ಹನಿ ಹಸಿರ ಗರಿಕೆಯ ಮುತ್ತಾಗುವ
ಮುಂಜಾವದಲಿ ಒಲುಮೆ ಲಜ್ಜೆಯ ನಿನ್ನ
ಹಾಲಗೆನ್ನೆಯ ಮೇಲೇರಿಸಿ ಬಂದುಬಿಡೆನ್ನ ಬಾಳಿಗೆ..

ಆಷಾಡದ ಗಾಳಿ ಮುಗಿದು... ಶ್ರಾವಣದ ಗಾಳಿ ನಿನ್ನ ಕವಿತೆಯಿಂದ ಚೆನ್ನಾಗಿ ಹೊರಹೊಮ್ಮಿದೆ..
ಎಲ್ಲ ಮಾಸದ ಗಾಳಿಗೂ ಮುಂದುವರೆಯಲಿ...

ಸೀತಾರಾಮ. ಕೆ. / SITARAM.K said...

Excellent poem

Unknown said...

priya geleya karedaddu maduvege hordaaddu shavayaathrege lekhana odi ondu bageya shoonya aavarisidantaayayt , badukendare heege thaane ella kanasu,aase, neerikshegalannu saddillade chooru chooru maadi hege endu anakisuvanthaddu. nimma blog thumba channagi bartide lekhanagalige ondu layavide thukavide keep it up , nimma saahitya yaaytreyali naavu saha prayanikaraargi idde irtivi.
preethiyinda AGNIMITHRA.

ಚರಿತಾ said...

ವಾಹ್,ಹೀಗೆ ಕರೆದರೆ ಬರದೆ ಇರ್ತಾರಾ...?!
:-)
ನಿಮ್ಮ ಕರೆಯ ತಂಗಾಳಿಯಮಲು ಶ್ರಾವಣವನ್ನು ಮತ್ತಷ್ಟು ಸಿಹಿಗೊಳಿಸಿ ಎಲ್ಲಾ ವಿರಹಿಗಳ ಮನಸಿನ ಮಾತಿನಂತೆ ಭಾಸವಾಗುತ್ತಿದೆ.
ಧನ್ಯವಾದಗಳು.

kavya H S said...

"sotavana baala deevigege nalumeya batti hosedu" kavana hegide anta heloke naanu barahagaarti agidre varnisi bareyebahuditteno adare nange baravanige odi saviyalaste tilidiruvudu,barahada saalugalu nimmade anubhavaveno ennuvantide,anubhavavillade aa baravanigeyalli jeeva tumbiddiri,anubhavisi baredare sanjeevini tumbiruttireno. Barahagalu thumba chennagi moodi baruttive,heege saagali sahayaatriya payana

bilimugilu said...

tumbaa chennaagide eesha,
perfect lines....
nanagantoo pratee saalu ishtavaaytu
heege bareyutiri... :-)

sethubandha said...

oh, bellam belagina chumu chumu chaliya,
manjina haniya muthina maleya,
muddina manada preetiya gelatiya
inneshtu kavyathmakavagi

manadalake kareyalu sadhya
sundara
adbhuta

ಗೋವಿಂದ್ರಾಜ್ said...

ashadada ondu dina heege nalleyondige kuliti atava nadedaduva kalpane chenda gowda padya barevanthe madiddu chenda...

Ramyashree said...

Ninna kavan chennagide.. heege bareyutthiru :-)

Anonymous said...

aashada kaledu..shravanada navachaitnyava hommisuva kaalachakra......ellellu pasaruva ullasagalannu balu sogasaagi nimma lekhanadalli bimbisiddiri..
PRAJGNAMALA