Tuesday, July 7, 2009

ತೀರವು ನಾ...



ತೀರವು ನಾ...

ನದಿಯೊಡಲ ವಿಕ್ಷಿಪ್ತ ನಿನ್ನ ಅಂತರಾಳವು

ನಿಗೂಡ ಒಡಲಿಂದ ಚಿಮ್ಮಿ ಬರುವ

ಒಲವಿನ ಅಲೆಯ ಜೀವಸ್ಪರ್ಷದಲಿ

ರೋಮಾಂಚನವಾಗುತಿಹ ತೀರವು ನಾ.....

ಅಪರಿಮಿತ ಅಲೆಗಳ ಬಡಿತದಲಿ

ನದಿಯೊಡಲತುಮುಲವರಿವ ತವಕದಲಿ ಮೂಡಿದ

ಅವಿನಾಭಾವ ಸಂಭಂದದಲಿ

ಪುಳಕಿತವಾಗುತಿಹ ತೀರವು ನಾ....

1 comment:

ಗೋವಿಂದ್ರಾಜ್ said...

ತೀರ ನಾನು ಎನ್ನುತ್ತಾ ಏನೇನನ್ನೂ ಹೇಳುತ್ತ ನದಿಯಲೆಗೆ ರೋಮಾಂಚನ ಗೊಳ್ಳುವ ಕಲ್ಪನೆಯ ಪರಿಏ ಸೊಗಸು...ರೋಮಾಂಚತೀನ ಹೀಗೆ ಇರಲಿ...