Friday, July 17, 2009

ಮಳೆ ಬರುವ ಹೊತ್ತಲಿ...

ಕಾದೆ ನಾನು, ಮಳೆಯ ಹನಿಗೆ
ಕಾಯುವ ಬುವಿಯಂತೆ,
ಅವಳದೊಂದು ಮಂದನಗೆಗೆ
ಮೊಗವ ತೋರಿ ಮರೆಯಾದಳು
ಕಪ್ಪನೆ ಮೋಡದಂತೆ
ಬೀಸುವ ಬಿರುಗಾಳಿಗೆ.


ಮೋಡದ ಕಣ್ಣಾ ಮುಚ್ಚಾಲೆ ಆಟ ಮುಗಿದು ಎಲ್ಲೆಲ್ಲು ಮಳೆ,ಮಳೆ,ಮಳೆ. ಸುರಿವ ಮಳೆ ಹೊತ್ತು ತರುವ ನೆನಪುಗಳು ಅಪಾರ. ಬಹಳ ದಿನಗಳಿಂದ ಯಾವುದೋ ಚುಂಬಕ ಪ್ರೀತಿಗೆ ಕಾದು ಬಯಲಾಗಿ ನಿಂತ ಇಳೆ ಪ್ರತಿ ಹನಿಯ ಸ್ಪರ್ಶಕೂ ಪುಳಕಗೊಂಡು ಮತ್ತೆ ಮೆದುವಾಗಿ ಅರಳುವ ಬಗೆಯಂತು ಮೋಹಕ. ಮೊದಲ ಮಳೆಗೆ ಗಮ್ಮಗೆ ಹೊಮ್ಮುವ ಮಣ್ಣಿನ ಕಂಪಿನಲ್ಲಿರುವ ಆಹ್ಲಾದತೆಗೆ ಸಾಟಿ ಯಾವುದಲ್ಲವೇ!



ವಸಂತಕೆ ಚಿಗುರಿದ ಹೂ ಬನ,ವನವೆಲ್ಲ,ಮೊದಲ ಮುಂಗಾರಿಗೆ ನಾಟಿಮಾಡಿದ ಹೊಲ ಗದ್ದೆಗಳೆಲ್ಲ ಮಳೆಯ ಜೀವ ಸ್ಪರ್ಶಕೆ ನಳನಳಿಸುತ ತೊನೆದಾಡುವ ಬಗೆಯೇ ವಿಸ್ಮಯ. ಎಲ್ಲೆಂದರೆಲ್ಲಿ ಹಸಿರ ಹೊದ್ದು ತುಂತುರು ಹನಿಗೆ ಜೀವರಾಗ ಮಿಡಿವ ಭೂರಮೆಯ ವಯ್ಯಾರಕೆ,ಸೋತು ಸುಣ್ಣಾದ ಮನವು ಮರುಗದಿರದು.



ಮಳೆ ತರುವ ನೆನಪುಗಳು ಅಸ್ಟೆ,ಮನವ ತಣಿಸುತ್ತವೆ.ಬಾಲ್ಯದಲೆಲ್ಲೋ ಮಳೆಯಲಿ ನೆಂದು ಸಂತಸದಿ ತೊಯ್ದಾಡಿದ ದಿನಗಳು,ಮೊದಲ ಭಾರಿ ಒಟ್ಟಿಗೆ ಮಳೆಯಲಿ ನೆನೆದ ಪ್ರೇಮಿಗಳ ಆ ಮಧುರ ಕ್ಷಣಗಳು,ಜಡಿ ಮಳೆಯಲಿ ಕೊಚ್ಚಿ ಹೋದ ರೈತನ ಪಸಲು, ಬಿರುಮಳೆಯಲಿ ಕುಸಿದು ಬಿದ್ದ ಬಡವನ ಮನೆಯ ಛಾವಣಿ ಹೀಗೆ ಯಾವುದಾದರೊಂದು ನೆನಪಿನೊಂದಿಗೆ ಜಂಟಿಯಾಗಿರುವ ಮಳೆ, ವರುಷ ವರುಷವು ನೋವಿನ-ನಲಿವಿನ ನೆನಪಿನ ಹೊಳೆಯ ಹರಿಸದೇ ಬಿಡದು.



ಕೇರಳದ ಗಡಿಗೆ ಅಂಟಿಕೊಂಡಿರುವ H.D.ಕೋಟೆಯಲಿರುವ ದಿನಗಳಲಿ ನಮ್ಮ ಸಮಯವನೆಲ್ಲ ನೀರಸವಾಗಿ ನೀರಿನಲಿ ತೊಯ್ದಂತೆ ಎಡಬಿಡದೆ ಸುರಿಯುತ್ತಿದ್ದ ಮಳೆಯನು ಶಪಿಸಿದ್ದು ಇದೆಯಾದರೂ ಸ್ನೇಹಿತರೆ, ಎಲ್ಲ ಎಲ್ಲೆಯನು ಮೀರಿ ತನ್ನ ಪಾಡಿಗೆ ತಾನು ಸುರಿದು ಸರಿವ ಮಳೆಯ ಲಕ್ಷಣವೇ ನನಗಿಸ್ಟ್ಟವಾಗಿ ಕಾಡೋದು. ನಮ್ಮ ನಮ್ಮ ನಡುವಿನ ಅಂತಹ ಎಲ್ಲೆಗಳನು ಮೀರಿ, ಸುರಿವ ಜಡಿಮಳೆಯಲೊಮ್ಮೆ,ಮತ್ತೊಮ್ಮೆ ನೆನೆದು ನೆಲ್ಮೆಯ ಸಂಗಾತಿಯೊಡನೆ ಪಿಸುಗುಡುತ್ತಾ...ಭಾವಲೋಕದಲಿ ಮೆಲ್ಲ ಮೆಲ್ಲನೆ ವಿರಮಿಸೋಣ ಬನ್ನಿ..




ಮಳೆಯ ಪುಳಕ...

ಮೋಡದ ಒಡಲು ಹೊಡೆಯಿತು ಹನಿಗಳ
ಭಾರವ ತಾಳದೇ; ಹನಿಯು ಕೆಳಗಿಳಿಯಿತು
ಬುವಿಯ ಪ್ರೇಮ ಗುರುತ್ವಕೆ ಸೋತು.

ಕಾದ ಬುವಿಯು ಪುಳಕಿತು
ಹನಿಯ ಅಮೃತ ಸ್ಪರ್ಶದಿ
ಜೀವ ಪಡೆದು ಚಿಗುರೊಡೆಯಿತು
ಭುವನದ ವನರಾಶಿ ಹಸಿರ ಚಿಗುರ
ವನರಾಶಿ ಮತ್ತೆ ಕರೆಯಿತು ಮಳೆಯ
ಪ್ರೇಮದಿ ಹನಿಯಾಗಿ ಧರೆಗೆ ಇಳೆಯೆಂದು.


ಇಳಿಯಿತು ಮಳೆಯೂ,
ಹರಿಯಿತು ಪಸರಿಸಿತು ಜೀವಕಳೆಯ
ಸೊಬಗ ಧರೆಯ ತುಂಬೆಲ್ಲ:
ಹಸುರಾಯಿತು ಹೊಲ,ಗದ್ದೆ,
ಬನವೆಲ್ಲ ಮಳೆಯ
ಜೀವಸ್ಪರ್ಶದಿ.....

13 comments:

Unknown said...

"Maleya pulaka" ondu pulakada nenapannu tanditu," besige mugidu malegaala shuruvaagiddaru mungaaru maleya ondu hani bhoomige biddillavenu,hani biddiddaru bhoomi tamppaguvastu allavendu prati sala phone madidaagalu anna helutidda naanu haasanadalliddaga,eno ondu reetiya besara,mattondu dina kare maadidaaga saakastu male agiruvuddagi tilisida, kanmucchi kulita nanage alli suriyuttiruva maleyalli nenedu kunidu kuppalisidantaytu" e sundara galigeyanna maleya pulaka nenapu tanditu. moda mattu suriva maleyinda bandiruva prema kavana chennagide,kahi sihi nenapugalannu taruva male jeevanakke allade a jeevanada bhavanegaligu hattiravaagide......
kavya h.s through mail

ಶ್ರೀನಿವಾಸಗೌಡ said...

"ಬಾಲ್ಯದಲೆಲ್ಲೋ ಮಳೆಯಲಿ ನೆಂದು ಸಂತಸದಿ ತೊಯ್ದಾಡಿದ ದಿನಗಳು,ಮೊದಲ ಭಾರಿ ಒಟ್ಟಿಗೆ ಮಳೆಯಲಿ ನೆನೆದ ಪ್ರೇಮಿಗಳ ಆ ಮಧುರ ಕ್ಷಣಗಳು" ಈ ಎರಡು ಸಾಲುಗಳನ್ನ ಓದಿ ನಾನು ಖಿನ್ನನಾಗಿದ್ದೇನೆ ಗೆಳೆಯ ನಾನಿರುವ ಊರಲ್ಲಿ ಮಳೆ ಇಲ್ಲ, ಈಗ ನನ್ನ ಹತ್ತಿರ ಬಾಲ್ಯವೂ ಇಲ್ಲ,ಗೆಳತಿ ಇಲ್ಲವೇ ಇಲ್ಲ, ಆದರೆ ನೆನಪುಗಳು ಹಾಗೆ ಇವೆ, ಅವು ಯಾಕೋ ಚಿಗುರುತ್ತಿವೆ ಹಾಡಾಗಿ.....

Prema said...

’ಭುವಿಯ ಪ್ರೇಮದ ಗುರುತ್ವ’ ವಾಹ್ ... ತು೦ಬ ಹಿಡಿಸಿತು , ಬಾಲ್ಯದ ನೆನಪೇ ಜೀವನದಲ್ಲಿನ ಮಧುರ ಸ೦ವೇದನೆಯ ಖಜಾನೆ.......
ಬಾಲ್ಯದಲ್ಲಿನ ಮಳೆಯ ನೆನೆಪು ನನ್ನನ್ನು ಮತ್ತೊಮ್ಮೆ ತೊಯ್ಸಿದೆ ನಿಮ್ಮ ಕವಿತೆಯ ಸಾಲುಗಳಿ೦ದ....

Unknown said...

kavana channagidey kano........... iys reminding my ex-love story..............

udaya said...

ಮಳೆ ಎಂದರೆ ನೆನಪಗೊದೆ ಹಾಸನ... ಜಡಿ ಮಳೆ ಹೀಗು ಇರುತ್ತೆ ಅಂತ ಗೊತ್ತಾಗಿದ್ದೆ ಅಲ್ಲಿ... ಸುರಿವ ಮಳೆಗೆ ನೆನೆದು ಉಲ್ಲಾಸವಗುತ್ತಿದ್ದ ಕ್ಷಣ ಏನೋ ಮನಸ್ಸಿಗೆ ಆನಂದ ತರುತ್ತಿತ್ತು..
ತುಂಬ ಚೆನ್ನಾಗಿದೆ...

ಗೋವಿಂದ್ರಾಜ್ said...

ಮಳೆ ಎಂದರೆ ಎಂಥದೋ ಖುಸಿ ಉಣಿಸುವ ಜೀವ ಸೆಲೆ..ಅದನ್ನು ಮುನಿಯಾದ ಭೂಮಿ ತಾಯಿ ಕೂಡ ಒಳಗೆ ಒನುಭಾವಿಸುತ್ತಾಳೆ..ಆದರೆ ನೀನು ಭೂತಾಯಿಯೇ ಆಗಿ ಅಕ್ಷರಕ್ಕಿಲಿಸಿರುವುದು ಅದೆಷ್ಟು ಚೆಂದ...ಮಳೆಯದು ಒಂದು ಪುಳಕವದರೆ ನಿನ್ನ ಪದ್ಯದ್ದು ಮತ್ಹ್ತ್ಹೊಂದು...

Anonymous said...

ನನಗೆ ಮಳೆ ಕೇವಲ ಪುಳಕವಲ್ಲ.... ಹಸೆಮಣೆಯ ಮೇಲೆ ಕೂತ ಮದುವಣಗಿತ್ತಿಯ ಬಳೆಯ ಸದ್ದು, ಅವಳ ಬೆವರು, ಅವಳ ಕಾಲಸ0ದಿಯ ಆ0ತಕ ಮತ್ತು ಮ0ಚದ ಮೇಲೆ ನಲುಗುವ ಹೂಗಳ ಮೌನ ಸಮ್ಮತಿ, ಮಳೆ ನನಗೆ ಕಾಮ ಪ್ರಚೋದಕ.
ನಿಸಾರ್ ಅಹಮದ್
ಹೊಸಪೇಟೆ

Jayalaxmi said...

ನಿಜಕ್ಕೂ ಮಳೆಯ ವರ್ಣನೆಗೆ ನಿಮ್ಮ ಕಾವ್ಯಮಯ ಭಾಷೆ ಒಳ್ಳೆಯ ಸಾಥ್ ಕೊಡುತ್ತದೆ. ಹಾಗೆ ನೋಡಲು ಹೋದರೆ ಮಳೆಯೆ ಒಂದು ಕಾವ್ಯದಂತೆ ಅಂತ ನನ್ನ ಅನಿಸಿಕೆ.

ಏಕಾಂತ said...
This comment has been removed by the author.
ಏಕಾಂತ said...

ಹಾಯ್ ಈಶ! ಎಲ್ಲರೂ ಬ್ಲಾಗ್‍ಗೆ ಬಂದು ಹೋಗಿದ್ದಾರೆ. ನಾನು ಬರೋದು ತಡವಾಯ್ತು. ಬರಹಗಳು ಆಪ್ತವಾಗಿದೆ. ಬರವಣಿಗೆಯನ್ನು ಜಿವಂತವಾಗಿರಿಸೋದು ಅಷ್ಟು ಸುಲಭದ ಮಾತಲ್ಲ. ಹಾಗಿರೋವಾಗ ಇಷ್ಟು ಬರಿತಿರೋದು ನೋಡುವಾಗ ಖುಷಿಯಾಗುತ್ತೆ! ಬರವಣಿಗೆ ಅಂದ್ರೆ ಒಂಥರಾ ಅಳೋದು. ಅದೆಷ್ಟೋ ದಿನಗಳಿಂದ ಹೂತು ಹೂಳಾಗಿರೋ ನೋವುಗಳು ಹರಿದು ಹೋಗಬೇಕು. ಆಗ ಎಲ್ಲವೂ ಸ್ವಚ್ಛ. ಗುಡ್ ಲಕ್ ಈಶ...

Unknown said...

ಮಳೆ ಬಗ್ಗೆ ಬರ್ದಿರೋದು ತುಂಬ ಚೆನ್ನಾಗಿದೆ.. ನಾನು ಫೇಲ್ ಆಗಿ ಮಳೆ ಗಾಲ ದಲ್ಲಿ ಊರು ರಲ್ಲಿ ...ಇದಿದ್ದು ನೆನಪು ಆಯಿತು ...

ಸೀತಾರಾಮ. ಕೆ. / SITARAM.K said...

ಮೈ ಮನಗಳು ಪುಳಕಗೊ೦ಡವು ನಿಮ್ಮ ಈ ಮಳೆಯ ಹಾಡನ್ನು ಓದಿ. ಅದ್ಭುತವಾಗಿ ವಿವರಿಸಿರುವಿರಿ. ಹೋಲಿಕೆಗಳು ಅರ್ಥಗರ್ಭಿತವಾಗಿವೆ. ತಮ್ಮ ಸಾಹಿತ್ಯ ಸೇವೆ ನಿರ೦ತರ ಮು೦ದುವರೆಯಲಿ.

Ramyashree said...

Lekhana bahala chennagide... ninna baraha nange naanu oduvaga mangalore nalli kaleda dinagalannu nenapisitu. Aa maleyalle nenedu naanu nanna appanondige parikshe bareyalu hodaddu, nantharada dinagalalli nanna preethiyannu bhetiyadaddu, avarondige kaleda kshanagalu, maleyalle nenedu mess ge ootakke hogutthiddudu ella nenapadavu :).
Male endare heegu irutthade endu naanu thilidadde Mangalore nalli...
Adondu sundara anubhava. Namma college na eduruge idda samudra nodalu balu sundara. Ella nenasikondre eegalu nanna mai mana pulakagollutthade...