ಕರೆದದ್ದು ಮದುವೆಗೆ, ನಾ ಹೋದದ್ದು ಶವಯಾತ್ರೆಗೆ.......
ಬದುಕಲಿ ಜರುಗುವ ಆಕಸ್ಮಿಕ ಘಟನೆಗಳು ಕೆಲವೊಮ್ಮೆ ಜೀವನವಿಡಿ ಕಹಿ ನೆನಪಾಗಿ ಉಳಿದುಬಿಡುತ್ತವೆ. ಹೆಚ್. ಡಿ.ಕೋಟೆಯಲಿ ಉಪನ್ಯಾಸಕನಾಗಿದ್ದಾಗ ನನ್ನ ರೂಮ್ನಲ್ಲಿ ಜೊತೆಗಿದ್ದ p t teacher ದೀನೇಶ ವಯೋಮಾನದಲಿ ನನಗಿಂತ ಹಿರಿಯನಾದರೂ,ಭಿನ್ನಾಭಿಪ್ರಯವಿಲ್ಲದೆ ಯಾವುದೇ ರೀತಿಯ ಇರಸು-ಮುರುಸಿಲ್ಲದೆ ನಮ್ಮ ಕೆಲಸಗಳನ್ನು ತಾನೇ ಮಾಡುತ್ತ,ಸುಮ್ಮನೆ ಬಿಟ್ಟರೆ ತೋಚಿದ್ದು ಹರಟುತ್ತ ಕಾಲ ಕಳೆಯುತ್ತಿದ್ದ ಗೆಳೆಯ.
ಹಾಗೆಯೇ ಏಳೆಂಟು ತಿಂಗಳುಗಳು ಕಳೆದ ನಂತರ ಅವನ ಮದುವೆ ಗೊತ್ತಾಗಿ ನಮ್ಮನೆಲ್ಲ ಆಹ್ವಾನಿಸಿದ.೩೨ ವರುಷದವನಾಗಿದ್ದ ದಿನೇಶನ ಜೀವನದಲಿ ಜರುಗಬೇಕಾದದ್ದು ಅದೊಂದ್ದೆ ಸಂಭ್ರಮ. ಮೈಸೂರಿನಿಂದ ಹೊರಗಡೆ ಉರಿನಲ್ಲಿ ಮದುವೆಯಾದುದರಿಂದ
ಯಾವುದೋ ಕುಂಟು ನೆಪ ಹೇಳಿ ಮದುವೆಗೆ ಹೋಗದೆ ಉಳಿದೆ. ಹಾಗಾಗಿ ಸಮಯ ಸಿಕ್ಕಾಗಲೆಲ್ಲ 'ನನ್ನ ಮದುವೆಗೆ ಬರದವರು ನೀವೆಂತ ಸ್ನೇಹಿತರು' ಎಂದು ಚೆಡುಸುತ್ತಲೇ ಇದ್ದ.
ಮದುವೆಯ ಓಡಾಟಗಳೆಲ್ಲ ಮುಗಿದು ಮತ್ತೆ ನಮ್ಮೊಂದಿಗೆ ಇರುವ ದಿನಗಳಲಿ ವಾರಕೊಮ್ಮೆ ಊರಿಗೆ ಹೋಗಿಬರುತ್ತಿದ್ದ ಅವನಲ್ಲಿ ನಡೆದಿರಬಹುದಾದ ರಾಸಲೀಲೆಗಳ ಬಗ್ಗೆ ಕುಚೋದ್ಯ ಮಾಡುತ್ತಿದ್ದೆವು.ದಾಂಪತ್ಯದ ಸಹಜಕ್ರಿಯೆಯಂತೆ ತಾನು ತಂದೆಯಾಗುತ್ತಿದ್ದುದನ್ನು ಗರ್ವದಿಂದ ವಿವರಿಸುತ್ತ, ತನಗೆ ತನ್ನಂತಹದ್ದೇ ಗಂಡುಮಗುವೇ ಆಗುತ್ತದೆಂದು ಎಲ್ಲರೆದುರು ಭವಿಷ್ಯ ನುಡಿಯುತ್ತಿದ್ದ.
ಆದರೆ ಅದ್ಯಾವ ದುರ್ವಿಧಿಯೋ ಆ ತಾಯಿಯದು, ಏಳು ತಿಂಗಳಿನ ತುಂಬು ಗರ್ಭಿಣಿಯ ಹೊಟ್ಟೆಯಲಿ ಮಗು ಅಡ್ಡಡ್ಡ ತಿರುಗಿ ಉಸಿರುಗಟ್ಟಿದಂತಾಗಿ ಆಕೆ ತೀರಿಕೊಂಡಳೆಂಬ ಸುದ್ದಿ ಕೇಳಿ ತಡೆಯಲಾಗದ ವೇದನೆ ಆವರಿಸಿತು.
ನೆವ ಹೂಡಿ ಸಂತಸದ ಕ್ಷಣಗಳಿಂದ ದೂರ ಉಳಿದಿದ್ದ ನಾನು ಆಕೆಯ ಶವಯಾತ್ರೆಯಲಿ ದುಖತಪ್ತನಾಗಿ,ನೋವಿನಲಿ ಕಂಬನಿಗರೆದು ಬಂದಿದ್ದೆ. ಅದಾದ ಕೆಲದಿನ ಬದುಕಿನ ಒಂಟಿತನ ಎಡಬಿಡದೆ ನನ್ನನ್ನು ಕಾಡಿತ್ತು.
ನೆವ ಹೂಡಿ ಸಂತಸದ ಕ್ಷಣಗಳಿಂದ ದೂರ ಉಳಿದಿದ್ದ ನಾನು ಆಕೆಯ ಶವಯಾತ್ರೆಯಲಿ ದುಖತಪ್ತನಾಗಿ,ನೋವಿನಲಿ ಕಂಬನಿಗರೆದು ಬಂದಿದ್ದೆ. ಅದಾದ ಕೆಲದಿನ ಬದುಕಿನ ಒಂಟಿತನ ಎಡಬಿಡದೆ ನನ್ನನ್ನು ಕಾಡಿತ್ತು.
ಬದುಕೆಂಬ ಒಂಟಿತನ
ಜೀವನ ಪಯಣದಲಿ ಸಾಂಗತ್ಯದ ಅರಿವಾಗಿ,
ಏಕಾಂತದ ಬದುಕು ಸಂಗಾತಿಯ ಬೆಚ್ಚನೆ
ಪ್ರೀತಿಯಲಿ ಅಸುನೀಗಿತ್ತು.ಭಾವನೆಗಳ ಅನುರಾಗ ಮೂಡಿ
ಜೀವನ ಒಲವ ಉಯ್ಯಾಲೆಯ ಜೋಕಾಲಿ.
ಪಯಣದ ಏರಿಳಿತಗಳಲಿ ಸಹಧರ್ಮಿಣಿಯಾಗಿ
ಜೊತೆಗಿರುವೆನು ಅನಂತಯಾನದ ದಿಗಂತದ
ವರಗೆ ಎನುವ ನಿನ್ನ ಭರವಸೆಗಳೇ ನವಚೇತನದ
ಹುರುಪನು ತುಂಬಿ ಜೀವನರಥದ ಗಾಲಿಯನು
ಮುನ್ನಡೆಸುತ್ತಿತ್ತು.
ಹೊಸ ತಿರುವಿನ ಆ ಪಯಣಕೆ ನಾಂದಿಯ ಹಾಡಿ
ಸಹಬಾಳ್ವೆಯ ರುಚಿಯನು ಉಣಿಸಿ ಪ್ರೀತಿ,
ಪ್ರೇಮದ ಕಡಲಲಿ ನನ್ನ ದಾಹವನು ನೀಗಿಸುತ್ತ
ನೀ, ನಮ್ಮ ಪ್ರೇಮದ ಕುರುಹನು ನನಗೆ ಜೀವಮಾನದ
ಕೊಡುಗೆಯಾಗಿ ನೀಡುತ್ತೇನೆಂದು ತರ
ಹೋದವಳು ಹಿಂತಿರುಗಿ ಬರಲೇ ಇಲ್ಲವಲ್ಲೇ?
ಅರಿವಾಹಿತು ಎಲ್ಲವು ಯಕಶ್ಚಿತವೆಂದು,
ಆದರೂ ನಿನ್ನ ನೆನಪನು ಹೊತ್ತುಕೊಂಡು ಬಾನಂಗಳದ
ನೀರವತೆಯಲಿ ಹಾರಡುತಿರುವೆನು
ವಲಸೆ ಹೋಗುವ ಹಕ್ಕಿಯಂತೆ
ಕಾಣದ ನಿನ್ನ ನಿಕ್ಷೇಪವನು ಹುಡುಕುತ..
14 comments:
ಮತ್ತೊಬ್ಬರ ನೋವಿಗೆ ಮಡಿವ ನಿನ್ನ ಜೀವಂತಿಕೆ ಹಾಗೆ ಇರಲಿ, ನೋಡು ಯಾರದೋ ನೋವು ನಿನ್ನೊಳಗೆ ಪದ್ಯವಾಗಿದೆ, ನಿನ್ನ ಕವಿತೆ ಹಿಂದೆ ಯಾವಾಗಲೋ ಓದಿದ ನೆನಪು ಪದ್ಯಕ್ಕೂ ಮೊದಲಿನ ಪರಿಚಯ ಆಪ್ತವಾಗಿದೆ.
Thanondu bagedare manava... bearrondu bagevude daiva.. aa devaranedurese jeeva.. padeetu noorentu nova..
ಕನಸೇ ಇಲ್ಲದ ನಿದ್ರೆ- ಸಾವು ಎ0ದ ಲ0ಕೇಶ್ ನೆನಪಾದರು
ನಿಸಾರ್
ಹೊಸಪೇಟೆ
abba!!! nijakku mana kalakuvanthide :-(
entha vidhiya aata alwa... odi thumba bejaraythu nanage haage bhayanu aaythu...
Jeevana neerina melina gulle iddanthe, yavaga yava gulle odeyuvudo aa devare balla...
adakke helodu iruvashtu dina chennagi irbeku antha...
ನಿಮ್ಮ ಸ್ನೇಹಿತರ ಬಗ್ಗೆ ಕೆಡುಕೆನಿಸಿತು ನಿಮ್ಮ ಬರಹ ಓದಿ. ಸಂತಸದಲ್ಲಿ ಪಾಲ್ಗೊಳ್ಳುವುದಕ್ಕಿಂತ ದುಃಖದಲ್ಲಿ ಪಾಲ್ಗೊಳ್ಳೋರು ಹೆಚ್ಚು ಆಪ್ತರಂತೆ.ಕವನದಲ್ಲಿ ನೋವು ಮಡುಗಟ್ಟಿದೆ.
ನಿಜವಾಗಿ ನಿಮ್ಮ ಸ್ನೇಹಿತನಿಗ ಅಂತ ಸಂಕಟ ತಂದೊಡ್ಡಿ ಜೀವನ ತುಂಬಾ ದುಬಾರಿ ಕಂದಾಯ ಕಟ್ಟಿಸಿಕೊಂಡಿದೆ. ಇನ್ನು ಮದುವೆಯಾಗದ ನಮಗೆಲ್ಲ ದಾಂಪತ್ಯ ಮುಂದೆ ಯಾವತ್ತಾದರೂ ಒಂದು ದಿನ ಬಂದೆ ಬರುವ ಹಬ್ಬದಂತದ್ದು ಅನ್ನೋ ನಿರೀಕ್ಷೆ. ಯಾರೋ ಸ್ನೇಹಿತರ ಸುಂದರ ದಾಂಪತ್ಯ ಕಂಡಾಗ ಮುಂದೆ ಒಂದಿನ ನನಗೂ ಇಂತ ಸಂತೋಷ ಕಾದಿದೆ ಅಂದುಕೊಂಡು ಕುಷಿ ಪಡ್ತೀವಿ... ಆದ್ರೆ ಅನಿರೀಕ್ಷಿತ ಆಘಾತಗಳು ತೀರ ಬದುಕಿನ ದೋಣಿಗೆ ತೂತು ಕೊರೆದರೆ ಅಬ್ಬ!
ಅರಿವಾಹಿತು ಎಲ್ಲವು ಯಕಶ್ಚಿತವೆಂದು,
ಆದರೂ ನಿನ್ನ ನೆನಪನು ಹೊತ್ತುಕೊಂಡು ಬಾನಂಗಳದ
ನೀರವತೆಯಲಿ ಹಾರಡುತಿರುವೆನು
ವಲಸೆ ಹೋಗುವ ಹಕ್ಕಿಯಂತೆ
ಕಾಣದ ನಿನ್ನ ನಿಕ್ಷೇಪವನು ಹುಡುಕುತ..
Nice to know abt the reason behind!!!
olle padya. sukshma bhava. "manujanilla' padyada spandana chennagide.
- Harish Kera
nalivige savira nentaru,
novige yaru illa annodu lokaarudi,
eesha baduku hege nammanu anirikshitavagi,
anapekshitha tiruvugalalli tandu nillisibidathe alwa
kavanada bhava lahari tumba sundara n heart touching
Esha, tragic ri.., kavanada bhaava haagu ottaare saaramsha mana kalukide.
Roopa Satish
good afternoon sir,
"karedaddu maduvege aadare hodaddu shavayatrege" idanna naanu blog open madida divasane odide aadare comment madi post madodu gottaglilla tappu madi computerinda
baisikonde.blog open maadida takshana yavudo ondu ummassu aavarisikonditu thumba gamana seledu samayavilladiddaru odalu prerepisiddu e title, kannirina hani ondara inde ondu jaaridavu swalpa hottu haage kulitubitte "jeevanada katina mukhada parichaya" illi nanage sikkitu.baravanigeyalli odugara mana muttuva tanmayate ide,aa tanmayate ella baravanigeyallu heege irali.
Thank you
chennagide.istavaytu.
ಶೀರ್ಷಿಕೆ ಆಕರ್ಷಣೀಯವಾಗಿ ಓದಲು ಪ್ರೇರೇಪಿಸಿತು. ಓದುತ್ತಾ ಮನಸ್ಸು ಬೇಜಾರುಗೊ೦ಡಿತು. ಕವನ ತಮ್ಮ ಮಿತ್ರರ ಬವಣೆಗೆ ತಮ್ಮ ಮರುಗನ್ನು ಕನ್ನಡಿಯಾಗಿ ಹೊರಬ೦ದಿದೆ. ಕಷ್ಟದಲ್ಲಿರುವರಿಗೆ ತಮ್ಮ ಮನ ಸದ ಮಿಡಿಯುತ್ತಿರಲಿ ಎ೦ದು ಹಾರೈಸುತ್ತೇನೆ.
Post a Comment