ಕಂಡಿಹೇನು ನಾ ಆ ಕಂಗಳಲಿ
ತುಂಬಿ ತುಳುಕುವ ನರುಗಂಪ
ಸೋತು ಸೊಕಲು ಕೈಗಳು
ಆ ಕಣ್ಣ ಸಂಭಂದದ
ಆಪಾದನೆ ಮಾಡದಿರಿ,
ಅರಿಯಲಷ್ಟೆ ಆತ್ಮವು
ಆ ಅನುಭವದ ಸಂತುಷ್ಟವ,
ಉಳಿಸಿ ಪ್ರೀತಿಯ ಪ್ರೀತಿಯಾಗೇ
ಆಪಾದಿಸದಿರಿ ಸಂಭಂದದ
ಲೇಪವ ಪ್ರೀತಿಗೆ....(ಗುಲ್ಜ್ಯಾರ್ )
ಕಳೆದ ವಾರ ಹೀಗೆ ಇಂಗ್ಲಿಷ್ ಪತ್ರಿಕೆ ಓದುತ್ತಿದ್ದವನ ಕಣ್ಣಿಗೆ ಬಿದ್ದದ್ದು ಗುಲ್ಜ್ಯಾರ್ ಕವಿಯ ಯಾವುದೋ ಹಳೆಯ ಹಿಂದಿ ಚಿತ್ರದ ಹಾಡಿನ ಕೆಲ ಸಾಲುಗಳು. ಪ್ರೇಯಸಿಯಡೆಗೆ ತನ್ನೆದೆಯಲಿ ಹುದುಗಿರುವ ತಿಳಿ ಪ್ರೇಮದ ಭಾವವನು ನಿವೇದಿಸುವ ಸಾಲುಗಳಲಿನ ಚಮತ್ಕಾರಕೆ ಸೋತು,ಆ ಕ್ಷಣದಲೇ ನನ್ನ ಅರಿವಿಗೆ ಬಂದಂತೆ ಆ ಸಾಲುಗಳನು ಕನ್ನಡಕೆ ಭಾಷಾಂತರಿಸಿದೆ.
ನನಗೆ ಆಪ್ತವಾದದೆ ಆ ಭಾವಲಹರಿಯನು ಹರಿಯ ಬಿಟ್ಟ ಕವಿಯ ಭಾಷೆಯ ಹಸಿ ಹಸಿ ನವಿರುತನ. ಬಹುಶಃ ನಲವತ್ತು ವರುಷಗಳ ಹಳೆಯ ಹಾಡಿನಲ್ಲಿ ಇಂದಿಗೂ ನನ್ನಂತವನಿಗೆ ಸಿಗುವ ಮನವನು ತಣಿಸುವ ಆ ಲಯ ಸಂಚಲನಕೆ ಕವಿಗೆ ವಂದಿಸಬೇಕೆನಿಸುತ್ತದೆ.
ನನಗೆ ಆಪ್ತವಾದದೆ ಆ ಭಾವಲಹರಿಯನು ಹರಿಯ ಬಿಟ್ಟ ಕವಿಯ ಭಾಷೆಯ ಹಸಿ ಹಸಿ ನವಿರುತನ. ಬಹುಶಃ ನಲವತ್ತು ವರುಷಗಳ ಹಳೆಯ ಹಾಡಿನಲ್ಲಿ ಇಂದಿಗೂ ನನ್ನಂತವನಿಗೆ ಸಿಗುವ ಮನವನು ತಣಿಸುವ ಆ ಲಯ ಸಂಚಲನಕೆ ಕವಿಗೆ ವಂದಿಸಬೇಕೆನಿಸುತ್ತದೆ.
ಕಳೆದ ಕೆಲದಿನಗಳಿಂದ ಹಾಗೇ ಮನಸಿಗೆ ಹತ್ತಿರವಾದ ಕೆಲವು ಹಿಂದಿ ಶಾಯರಿಗಳನು ಸುಮ್ಮನೆ ಕುಳಿತಾಗಲೆಲ್ಲ ಕನ್ನಡದ ಭಾವರೂಪ ಕೊಟ್ಟಿದ್ದೇನೆ. ಹಿಂದಿ ಭಾಷೆಯ ಸುಲಲಿತತೆಗೆ ಒಗ್ಗಿದಸ್ತ್ಟು ನರಗಂಪುತನ ಕನ್ನಡದ ಗಜಲ್,ಶಾಯರಿಗಳಿಗೆ ಒದಗಿಲ್ಲವಾದರು, ಶಾಂತರಸ ಹಾಗೂ ಇತ್ತೀಚಿನ ಚಿದಾನಂದ ಸಾಲಿಯವರ ಗಜಲುಗಳಲಿ ನೀವು ಆ ತೀವ್ರತೆಯನು ಕಾಣಬಹುದು.ಪ್ರೀತಿ,ಪ್ರೇಮ ವಿರಹವನು ನಮ್ಮಯ ಭಾವಲೋಕದಲಿ ಅನುರಣಿಸುವ ಗಜಲ್, ಶಾಯರಿಗಳ ಗಮ್ಮತ್ತು ಅರಿತವರಿಗೆ ಅವು ನೀಡುವ ಮುದವನು ಮರೆಯಲು ಸಾದ್ಯವೇ ಇಲ್ಲ....ನಾನು ಭಾವರೂಪ ಕೊಟ್ಟಿರುವ ಈ ಸಾಲುಗಳು ನಿಮ್ಮ ಮನವನು ತಣಿಸಿದರೆ ಸಾಕಲ್ಲವೇ....
1
ಸಾಗರದ ತಳಮಳ ನಿನ್ನ ಕಣ್ಣೋಟ;
ಉಲ್ಲಾಸದ ಓಲಗ ನಿನ್ನ ಕಣ್ಣೋಟ;
ವಯ್ಯಾರ ತುಂಬಿದ ನೇರಳೆ ಹಣ್ಣು
ನಿನ್ನ ಕಣ್ಣೋಟ;
ಕಸಿದುಕೊಳ್ಳಲಿ ನನ್ನ ಪ್ರಾಣವ
ನಿನ್ನ ಕಣ್ಣೋಟ!
2
ಮುಸ್ಸಂಜೆಯ ತೇವ ಕಂಗಳಲಿ,
ಜಾರುತಿಹುದು ಇರುಳ ಕ್ಷಣ ಕ್ಷಣವೂ
ಆ ಕಂಗಳಲಿ,
ಮೋಸದ ಮೋಹಗೊಳಿಸಿ
ತೊರೆದು ಹೋದಳು
ಆದರೂ ಅವಳ ಚಿತ್ರಪಟವಿದೆ
ನನ್ನ ಕಂಗಳಲಿ.
5 comments:
viraha vedaneya prati pala mattu pritiya innondu mukha mosa ide.........
ನಿಂಗೆ ಹಳೇ ಹಾಡು, ಗಜಲು ಅಂದ್ರೆ ಇಷ್ಠ ಅಂತ ನಂಗೆ ಗೊತ್ತಿತ್ತು, ಈಗ ನೀನು ಮಾಡಿರೋ ಅನುವಾದ ಚನ್ನಾಗಿದೆಯಾ ಗೊತ್ತಿಲ್ಲ ಯಾಕಂದರೆ ನಾನು ಗಜಲ್ ಕೇಳಿಲ್ಲ, ಆದರೆ ಒಂದು ಮಾತು ನಿನ್ನ ಕವಿತೆ ನಂಗೆ ಹಿಡಿಸಿದೆ. ನನಗೆ ಯಾವಾಗಲೂ ಹಿಡಿಸೋದು ತಾವೇ ಬರೆದ ಕವಿತೆ. ಬೇರೆಯವರಿಂದ ಇನ್ಸಪೈರ್ ಆಗೋಣ, ಆದ್ರೆ ನಮ್ಮದನ್ನೇ ಸೃಷ್ಠಿಸೋಣ.ಅನುವಾದ ಮಾಡಕ್ಕೆ ನೂರು ಜನ ಇದಾರೆ ಲೋಕದಲ್ಲಿ..
ನಿನ್ನ ಹಳೇ ಪದ್ಯಗಳನ್ನ ಹಾಕು ಅವೇ ಸಾಕು.ಏನಂತೀಯಾ...
ನಮಸ್ತೆ,
ನಿಮ್ಮ ಬ್ಲಾಗ್ ನಲ್ಲಿ ಹಾಗೇ ಕಣ್ಣಾಡಿಸಿದೆ.ನಿಮಗೆ ಹಾರ್ದಿಕ ಸುಸ್ವಾಗತ.
ಕವಿಗಳೆಲ್ಲ ಹೀಗೆ ಬ್ಲಾಗ್ ಮನೆಗೆ ಲಗ್ಗೆ ಹಾಕುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.ಚಿತ್ರಗಳ ಆಯ್ಕೆ ಕೂಡ ಚೆನ್ನಾಗಿದೆ.
ನನ್ನ ಬ್ಲಾಗ್ ಅನಾಥ ಆಗ್ಬಿಟ್ಟಿದೆ.
ಸಧ್ಯಕ್ಕೆ ಅದನ್ನು ಮಾತಾಡಿಸುವಷ್ಟು ಬಿಡುವಾಗುತ್ತಿಲ್ಲ.
ನಿಮ್ಮ ಬ್ಲಾಗ್ ಬರಹಗಳನ್ನು ಮತ್ತೆ ಸಮಾಧಾನದಿಂದ ಕುಳಿತು ಓದುತ್ತೇನೆ.ಬ್ಲಾಗ್ ಶುರು ಮಾಡಿ ಒಳ್ಳೆಯದು ಮಾಡಿದಿರಿ.ಹಲವು ಸಹೃದಯ ಓದುಗರನ್ನು ಖಂಡಿತ ಗಳಿಸುತ್ತೀರ್ಇ.ಬರೆಯುತ್ತಿರಿ.
ಶುಭಾಶಯಗಳೊಂದಿಗೆ
-ಚರಿತಾ.
What gowda said is correct... U r translated Shayari's not strong as original..Every one start thinking to know abt original..
ಅನುವಾದದಲ್ಲಿ ಎಲ್ಲೋ ಕವಿ ಸೊರಗಿದ೦ತೆನಿಸುತ್ತಿದೆ. ಶಬ್ದಗಲ ಜೋಡಣೆ ನವಿರಾಗಿಲ್ಲ (ನರುಗೆ೦ಪು ಕುರಿತು). ಅದರೆ "ಸಾಗರ ತಳಮಳ" "ಮುಸ್ಸ೦ಜೆ ತೇವ" ಚೆನ್ನಾಗಿ ಅನುವಾದಗೊ೦ಡಿವೆ.
Post a Comment