ನಮ್ಮ ನಿಮ್ಮ ನಡುವೆ ನಲುಮೆಯ
ಭಾವ ಲೋಕ ಅರಳಲಿ. . .
ಸಹಯಾತ್ರಿಗಳೇ ಬ್ಲಾಗ್ ಗೆ ನೀವು ನೀಡುತ್ತಿರುವ ಪ್ರೋತ್ಸಾಹ,ನನ್ನ ಮೇಲಿನ ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.
ಸ್ನೇಹಿತರೇ, ಬರಹವೆಂದರೆ ಮನದಲಿ ಎಸ್ಟೋ ದಿನಗಳಿಂದ ಮಡುಗಟ್ಟಿದ ಭಾವಗಳ ಪ್ರಸವ.ಬರಹ ನೀಡುವ ವೇದನೆ ಸುಮಧುರ.ಈಗೀಗ ಆ ವೇದನೆಯ ಮತ್ತೆ ಮತ್ತೆ ಸವಿಯೋಣ ಎಂದೆನಿಸುತ್ತದೆ.
ಬ್ಲಾಗ್ ಮಾಡಿ ಬರೆದು ಹಾಕಿದರೆ ಓದುವವರು ಯಾರು? ಎಂಬ ಮನಸ್ತ್ತಿತಿಯಲೇ ಹಲವು ದಿನಗಳ ದೂಡಿಬಿಟ್ಟೆ. ಆದರೆ 'ಸಹಯಾತ್ರಿಯ' ಆರಂಭಿಸಿದ ದಿನದಿಂದ ಅದಕ್ಕೆ ನಿಮ್ಮಿಂದ ಸಿಕ್ಕ ಪ್ರತಿಸ್ಪಂಧನಕೆ ಮನದಲೇನೋ ಹೊಸ ಹುರುಪು.
ಅನುದಿನವು ಏನಾದರು ಬರೆಯೋಣ ಎಂದೆನಿಸುತ್ತದೆ. ಓದುಗರಿದ್ದರೆ ಬರೆಯಲು ನಮಗೂ ಸ್ಫೂರ್ತಿ.
ನಿತ್ಯ ನೂತನವ ಹರಸುತ, ನಮ್ಮ ಸಂಬಂಧ ಮತ್ತಷ್ಟು, ಮೊಗದಸ್ಟು ಗಾಢವಾಗಲಿ ಎಂದು ಆಶಿಸುವೆ ಸಹಯಾತ್ರಿಗಳೇ.....ವಂದನೆಗಳು.
3 comments:
ಈಶ, ನಿಮ್ಮ ವಿನೀತ ಮಾರ್ದವತೆ ಎಲ್ಲಾ ಸಹೃದಯರಿಗೆ ಖಂಡಿತ ತಲುಪುತ್ತೆ.
ಬರಹ ಒಂದು ಸುಮಧುರ ವೇದನೆ ಅಂತ ಎಷ್ಟು ಚೆನ್ನಾಗಿ ಹೇಳಿದ್ದೀರಿ. ನಿಜ. ಹೇಳಲಾಗುವ-ಆಗದ, ಎಟುಕುವ-ಎಟುಕದ ಎಲ್ಲಾ ತುಮುಲಗಳನ್ನು ಸಿಕ್ಕಷ್ಟು ಬಾಚಿ ಬೊಗಸೆ ತುಂಬ ಮೊಗೆದು ಕೊಟ್ಟುಬಿಡುವುದಷ್ಟೆ ಬರಹದ ಸೊಗಸು.
ನಿಮ್ಮ ಪಯಣದಲ್ಲಿ ಸಹಯಾತ್ರಿಗಳಾಗಿರುವುದು ನಮ್ಮೆಲ್ಲರನ್ನು ಮತ್ತಷ್ಟು ಆಸೆಬುರುಕರನ್ನಾಗಿ ಮಾಡಿದೆ.
ಹರಟುತ್ತಾ,..ಪೋಣಿಸುತ್ತಾ,ಚೆಲ್ಲಿದ್ದನ್ನು ಹೆರಕುತ್ತ,ರೋಮಾಂಚನಗೊಳ್ಳುತ್ತ ನಡೆಯುವುದಷ್ಟೆ...
ಇಲ್ಲಿ ಹಾಕಿರುವ ಚಿತ್ರ ಯಾರು ಬರೆದದ್ದು..?
ಹೀಗೆ ಮುಂದುವರಿಯಲಿ ನಿನ್ನ ಭಾವಲೋಕ...
"Baraha needuva vedane sumadhura" idu aksharashaha nija mattu mana muttuva maatu. Chikkandinalli snehitarige patra bareyuvaaga sigutidda kushi,ananda,a anubhava edurige sikki athava phoninalli gantegattale maataduvaaga siguvudilla,a sumadura barahada anubhava sahayaatriyodane beretu sikkide,sundara barahagalanna odutta,anisikegalanna helutta mana tanna ottadagala naduve haguraagutide. Sahayaatriya ellarigu abhinandanegalu
Post a Comment